ನವದೆಹಲಿ: ಗಾಲ್ವನ್ ಕಣಿಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಬಡಿದಾಟದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರಿಸಿದ್ದಾರೆ.
'ಸರ್ಕಾರ ದೀರ್ಘಕಾಲದ ನಿದ್ದೆಗೆ ಜಾರಿದ ಪರಿಣಾಮ ಯೋಧರು ಬೆಲೆ ತೆರಬೇಕಾಯ್ತು' - ಭಾರತ ಚೀನಾ ಯುದ್ಧ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ದೀರ್ಘಕಾಲದ ನಿದ್ದೆಗೆ ಜಾರಿದೆ ಮತ್ತು ಸಮಸ್ಯೆ ಬಗೆಹರಿಸಲು ತಡಮಾಡಿದೆ. ಇದರ ಪರಿಣಾಮವಾಗಿ ನಮ್ಮ ಯೋಧರು ಹುತಾತ್ಮರಾಗುವ ಮೂಲಕ ಬೆಲೆ ತೆರಬೇಕಾಯಿತು ಎಂದು ಆರೋಪಿಸಿದ್ದಾರೆ.
ಸರ್ಕಾರ ದೀರ್ಘಕಾಲದ ನಿದ್ದೆಗೆ ಜಾರಿದೆ; ಗಡಿಯಲ್ಲಿ ಯೋಧರು ಬೆಲೆ ತೆರಬೇಕಾಯಿತು-ರಾಹುಲ್ ಕಿಡಿ
ಈ ಬಗ್ಗೆ ಟ್ವಿಟರ್‌ನಲ್ಲಿ ಮೂರು ಅಂಶಗಳನ್ನು ಪ್ರಸ್ತಾಪಿಸಿರುವ ಅವರು, ಗಾಲ್ವನ್‌ನಲ್ಲಿ ನಡೆದಿರುವ ಘರ್ಷಣೆ ಪೂರ್ವ ನಿಯೋಜಿತವಾಗಿದೆ. ಅಲ್ಲದೆ, ಕೇಂದ್ರ ಸರ್ಕಾರ ದೀರ್ಘಕಾಲದ ನಿದ್ದೆಗೆ ಜಾರಿದೆ ಮತ್ತು ಸಮಸ್ಯೆಯನ್ನು ಬಗೆಹರಿಸಲು ತಡಮಾಡಿದೆ. ಇದರ ಪರಿಣಾಮವಾಗಿ ನಮ್ಮ ಯೋಧರು ಹುತಾತ್ಮರಾಗುವ ಮೂಲಕ ಬೆಲೆ ತೆರಬೇಕಾಯಿತು ಎಂದು ಆರೋಪಿಸಿದ್ದಾರೆ.
ಪೂರ್ವ ಲಡಾಖ್‌ನಲ್ಲಿ ಕಳೆದ ಸೋಮವಾರ ರಾತ್ರಿ ನಡೆದಿದ್ದ ಭಾರತ-ಚೀನಾ ಸೇನೆಗಳ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದರು.