ಕರ್ನಾಟಕ

karnataka

ETV Bharat / bharat

ನನ್ನನ್ನು ಜೈಲಿಗೆ ಕಳಿಸಲು ಸರ್ಕಾರದಿಂದ ಯತ್ನ: ಕಂಗನಾ ರಣಾವತ್ - ಕಂಗನಾ ವಿರುದ್ಧ ಎಫ್​ಐಆರ್ ದಾಖಲು

ಮಹಾರಾಷ್ಟ್ರ ಸರ್ಕಾರ ನನ್ನನ್ನು ಜೈಲಿಗೆ ಕಳಿಸಲು ಪ್ರಯತ್ನಿಸುತ್ತಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ.

Kangana
ಕಂಗನಾ ರಣಾವತ್

By

Published : Oct 23, 2020, 1:06 PM IST

ಮುಂಬೈ:ಸರ್ಕಾರ ನನ್ನನ್ನು ಜೈಲಿನಲ್ಲಿಡಲು ಪ್ರಯಯತ್ನಿಸುತ್ತಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಆರೋಪಿಸಿದ್ದು, ಇದು ನನ್ನ ಆಯ್ಕೆಗಳ ಬಗ್ಗೆ ಭರವಸೆ ಮೂಡಿಸುವಂತೆ ಮಾಡುತ್ತಿದೆ ಎಂದಿದ್ದಾರೆ.

ಟ್ವಿಟ್ಟರ್​ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿರುವ ಕಂಗನಾ ನಾನು ಸಾವರ್ಕರ್, ನೇತಾಜಿ ಸುಭಾಷ್ ಚಂದ್ರ ಬೋಸ್, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅಂಥವರನ್ನು ಪೂಜಿಸುತ್ತೇನೆ. ಸರ್ಕಾರ ಈಗ ನನ್ನನ್ನು ಜೈಲಿಗೆ ಕಳಿಸಲು ಯತ್ನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಜೈಲಿಗೆ ಹೋಗಲು ಕಾಯುತ್ತಿದ್ದೇನೆ. ಇದು ನನ್ನ ಜೀವನಕ್ಕೆ ಹೊಸ ಅರ್ಥ ಕಲ್ಪಿಸುತ್ತದೆ ಎಂದು ಕಂಗನಾ ಪೋಸ್ಟ್ ಮಾಡಿದ್ದಾರೆ.

ಕೋಮುಗಳ ಪ್ರಚೋದನೆಗೆ ಯತ್ನ ಆರೋಪದಲ್ಲಿ ಕಂಗನಾ ವಿರುದ್ಧ ಎಫ್​ಐಆರ್ ದಾಖಲಾದ ಹಿನ್ನೆಲೆಯಲ್ಲಿ ಕಂಗನಾ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ನ್ಯಾಯಾಂಗದ ವಿರುದ್ಧ "ದುರುದ್ದೇಶಪೂರಿತ" ಟ್ವೀಟ್ ಪೋಸ್ಟ್ ಮಾಡಿದ್ದಕ್ಕಾಗಿ ಮುಂಬೈ ಮೂಲದ ವಕೀಲರೊಬ್ಬರು ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.

ಈ ದೂರನ್ನು ಮುಂಬೈ ಮೂಲದ ವಕೀಲ ಅಲಿ ಕಾಶಿಫ್ ಖಾನ್ ದೇಶ್​ಮುಖ್ ನೀಡಿದ್ದು, ಕಂಗನಾ ರಣಾವತ್ ಅವರು ಸುಶಾಂತ್​ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು, ಸರ್ಕಾರದ ವಿರುದ್ಧ ನಿಂತಿರುವುದು ಮಾತ್ರವಲ್ಲದೇ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಜನರ ನಡುವೆ ದ್ವೇಷ ಹುಟ್ಟುಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.

ABOUT THE AUTHOR

...view details