ನವದೆಹಲಿ:ಲಡಾಖ್ನ ಗಲ್ವಾನ್ ವ್ಯಾಲಿಯಲ್ಲಿ ಭಾರತ-ಚೀನಾ ಸಂಘರ್ಷದಿಂದಾಗ ಭಾರತದ 22 ಯೋಧರು ಹುತಾತ್ಮರಾಗಿದ್ದು, ಇದರ ಬೆನ್ನಲ್ಲೇ ಚೀನಾ ವಸ್ತು ಬಹಿಷ್ಕಾರ ಮಾಡುವಂತೆ ಎಲ್ಲೆಡೆಯಿಂದ ಮಹತ್ವದ ಕೂಗು ಕೇಳಿ ಬರುತ್ತಿದೆ.
ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಟಿಕ್ ಟಾಕ್, ಯುಸಿ ಬ್ರೌಸರ್ ಸೇರಿದಂತೆ ಚೀನಾದ 59 ಆ್ಯಪ್ ಬ್ಯಾನ್ ಮಾಡಿ ಆದೇಶ ಹೊರಹಾಕಿದೆ. ಪ್ರಮುಖವಾಗಿ ಟಿಕ್ಟಾಕ್, ಯುಸಿ ಬ್ರೌಸರ್, ಶೇರ್ ಇಟ್, ಹಲೋ, ಮೈ ಕಮ್ಯುನಿಟಿ, ವಿ ಚಾಟ್, ಕ್ಲಿನ್ ಮಾಸ್ಟರ್ ಸೇರಿದಂತೆ ಅನೇಕ ಡ್ರ್ಯಾಗನ್ ಆ್ಯಪ್ ಇದೀಗ ಬ್ಯಾನ್ ಆಗಿವೆ.
ಕೇಂದ್ರದಿಂದ ಬ್ಯಾನ್ ಆದ ಆ್ಯಪ್ ದೇಶದಲ್ಲಿ ಬಾಯ್ಕಾಟ್ ಅಸ್ತ್ರ ಪ್ರಯೋಗ ಮಾಡಲಾಗುತ್ತಿದ್ದು, ಚೀನಾದ ಉತ್ಪನ್ನ ಬಹಿಷ್ಕಾರ ಮಾಡಲಾಗುತ್ತಿದೆ. ರೈಲ್ವೆ ಇಲಾಖೆ ಈಗಾಗಲೇ ಸುಮಾರು 471 ಕೋಟಿ ರೂ ಮೌಲ್ಯದ 412 ಕಿಮೀ ಉದ್ದದ ಯೋಜನೆ ಒಪ್ಪಂದ ರದ್ದು ಮಾಡಿಕೊಂಡಿದೆ. ಮಹಾರಾಷ್ಟ್ರ ಕೂಡ 5 ಸಾವಿರ ಕೋಟಿ ರೂ ಒಪ್ಪಂದಕ್ಕೆ ತಡೆ ನೀಡಿದೆ.
ಭಾರತದಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಜತೆಗೆ ಚೀನಾ ಮತ್ತು ಯುಎಸ್ನಲ್ಲೂ ಇದರ ಬಳಕೆ ಜಾಸ್ತಿ ಇದೆ. ಭಾರತದಲ್ಲಿ 611 ಮಿಲಿಯನ್ಗಿಂತಲೂ ಹೆಚ್ಚು ಡೌನ್ಲೋಡ್ ಇದೆ. ಲಡಾಖ್ ಸಂಘರ್ಷದ ಬಳಿಕ ಭಾರತದಲ್ಲಿ ಚೀನಾ ಉತ್ಪನ್ನ ಬಹಿಷ್ಕರಿಸುವಂತೆ ಅಭಿಯಾನ ಆರಂಭಗೊಂಡಿದ್ದು, ಅದರ ಪರಿಣಾಮವಾಗಿ ಇದೀಗ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.