ಕರ್ನಾಟಕ

karnataka

ಎನ್​ಜಿಒಗಳಿಗೆ ಶಾಕ್​ ಕೊಟ್ಟ ಕೇಂದ್ರ ಸರ್ಕಾರ... ಈಗ ವಿದೇಶಿ ದೇಣಿಗೆ ಪಡೆಯುವುದು ಸುಲಭದ ಮಾತಲ್ಲ!

By

Published : Nov 12, 2020, 10:07 AM IST

ಎಫ್​ಸಿಆರ್​ಎ ಕಾಯ್ದೆ ಮೂಲಕ ವಿದೇಶಿ ದೇಣಿಗೆ ಪಡೆಯುತ್ತಿದ್ದ ಎನ್​ಜಿಒಗಳಿಗೆ ಕೇಂದ್ರ ಸರ್ಕಾರ ಶಾಕ್​ ಕೊಟ್ಟಿದೆ. ಹೊಸ ಅಧಿಸೂಚನೆ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯ ಪ್ರಕಾರ ಎನ್​ಜಿಒಗಳಿಗೆ ಈಗ ವಿದೇಶಿ ದೇಣಿಗೆ ಪಡೆಯುವುದು ಸುಲಭದ ಮಾತಾಗಿಲ್ಲ.

NGOs seeking registration  Union Home Ministry  Foreign Contribution (Regulation) Act  ಎನ್​ಜಿಒಗಳಿಗೆ ಶಾಕ್​ ಕೊಟ್ಟ ಕೇಂದ್ರ ಸರ್ಕಾರ  ಎಫ್​ಸಿಆರ್​ಎ ಕಾಯ್ದೆ  ಕೇಂದ್ರ ಗೃಹ ಸಚಿವಾಲಯ
ಸಂಗ್ರಹ ಚಿತ್ರ

ನವದೆಹಲಿ: ವಿದೇಶಿ ಧನಸಹಾಯ ಪಡೆಯಲು ಉದ್ದೇಶಿಸಿರುವ ಎನ್‌ಜಿಒಗಳಿಗೆ ಈಗ ಕೇಂದ್ರ ಸರ್ಕಾರ ಶಾಕ್​ ನೀಡಿದೆ. ವಿದೇಶಿ ದೇಣಿಗೆ ಸ್ವೀಕರಿಸುವ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎನ್​ಜಿಒಗಳ ನಿಯಮ ಬಿಗಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯ ಕ್ರಮ ತೆಗೆದುಕೊಂಡಿದೆ.

ಹೌದು, ವಿದೇಶಿ ಧನಸಹಾಯ ಪಡೆಯಲು ಉದ್ದೇಶಿಸಿದ ಎನ್​ಜಿಒಗಳು ಗೃಹ ಸಚಿವಾಲಯದ ಕಠಿಣ ನಿಯಮಗಳನ್ನು ಎದುರಿಸಬೇಕಾಗಿದೆ. ವಿದೇಶಿ ಧನಸಹಾಯ ಪಡೆಯುವ ಎನ್​ಜಿಒ ಸಂಸ್ಥೆಗಳು ಕನಿಷ್ಠ ಮೂರು ವರ್ಷಗಳ ಕಾಲ ಅಸ್ತಿತ್ವದಲ್ಲಿರಬೇಕು. ಸ್ವಯಂ ಪ್ರೇರಿತ ಚಟುವಟಿಕೆಗಳಲ್ಲಿ ಸುಮಾರು 15 ಲಕ್ಷ ಹಣವನ್ನು ವ್ಯಯಿಸಿದಾಗ ಮಾತ್ರ ವಿದೇಶಿ ಧನಸಹಾಯ ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಎಫ್​ಸಿಆರ್​ಎ ಕಾಯ್ದೆ ತಿದ್ದುಪಡಿ ಮಾಡಿದ ಎರಡು ತಿಂಗಳ ಬಳಿಕ ಕೇಂದ್ರ ಸರ್ಕಾರ ನಿಯಮ ಪರಿಷ್ಕರಣೆ ಮಾಡಿ ಅಧಿಸೂಚನೆ ಪ್ರಕಟಿಸಿದೆ. ಇದರಲ್ಲಿ ವಿದೇಶಿ ದೇಣಿಗೆ ಸ್ವೀಕರಿಸುವುದಕ್ಕೆ ಅನುಸರಿಸಬೇಕಾದ ಮಾನದಂಡಗಳು ಸೇರಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದೆ.

ಸರ್ಕಾರೇತರ ಸಂಸ್ಥೆಗಳು (ಎನ್​ಜಿಒ) ಕನಿಷ್ಠ ಮೂರು ವರ್ಷ ಚಾಲ್ತಿಯಲ್ಲಿದ್ದು, ಈ ಅವಧಿಯಲ್ಲಿ ಸ್ವಯಂ ಸೇವಾ ಚಟುವಟಿಕೆಗಳಿಗೆ 15 ಲಕ್ಷ ರೂಪಾಯಿ ವ್ಯಯಿಸಿರಬೇಕು. ಹಾಗಿದ್ದರಷ್ಟೇ ವಿದೇಶಿ ದೇಣಿಗೆ ಸ್ವೀಕರಿಸುವ ಅರ್ಹತೆ ಹೊಂದುತ್ತವೆ ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಪ್ರಕಾರ ನೋಂದಣಿ ಬಯಸುವ ಎನ್​ಜಿಒಗಳ ಪದಾಧಿಕಾರಿಗಳು ನಿಶ್ಚಿತ ಬದ್ಧತೆ ಪತ್ರವನ್ನು ಸಲ್ಲಿಸಬೇಕಾದ ಅವಶ್ಯಕತೆಯಿದೆ. ಇದರಲ್ಲಿ ದಾನಿ ನೀಡುವ ವಿದೇಶಿ ದೇಣಿಗೆಯ ಮೊತ್ತವನ್ನು ನಮೂದಿಸಬೇಕು ಮತ್ತು ಅದನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂಬುದನ್ನು ಉಲ್ಲೇಖಿಸಬೇಕು ಅಂತಾ ಕಾಯ್ದೆ ಮೂಲಕ ಅರ್ಹ ಎನ್​ಜಿಒಗಳಿಗೆ ತಿಳಿಸಲಾಗಿದೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಪ್ರಕಾರ ಯಾವುದೇ ಎನ್​ಜಿಒ ಅಥವಾ ವ್ಯಕ್ತಿ ವಿದೇಶಿ ದೇಣಿಗೆ ಸ್ವೀಕರಿಸುವುದಾದರೆ ಅದಕ್ಕೆ ಅರ್ಜಿ ಸಲ್ಲಿಸುವಾಗ ಅವರು ಎಫ್​ಸಿಆರ್​ಎ ಖಾತೆ ಹೊಂದಿರುವುದು ಕಡ್ಡಾಯವಾಗಿದೆ. ಎನ್‌ಜಿಒಗಳ ಪದಾಧಿಕಾರಿಗಳ ಆಧಾರ್ ಸಂಖ್ಯೆಯನ್ನು ಒದಗಿಸುವುದನ್ನು ಸಹ ಕಡ್ಡಾಯಗೊಳಿಸಲಾಗಿದೆ. ಕಚೇರಿ ವೆಚ್ಚವನ್ನು ದೇಣಿಗೆ ಮೊತ್ತದ ಶೇಕಡಾ 20 ಕ್ಕೆ ಇಳಿಸಲಾಗಿದೆ. ಚುನಾವಣಾ ಅಭ್ಯರ್ಥಿಗಳು, ಸರ್ಕಾರಿ ನೌಕರರು, ಯಾವುದೇ ಶಾಸಕಾಂಗ ಮತ್ತು ರಾಜಕೀಯ ಪಕ್ಷಗಳ ಸದಸ್ಯರು ವಿದೇಶಿ ಹಣವನ್ನು ಸ್ವೀಕರಿಸುವುದನ್ನು ನಿಷೇಧಿಸಲಾಗಿದೆ ಎಂಬುದು ನೋಟಿಸ್​ನಲ್ಲಿ ತಿಳಿಸಲಾಗಿದೆ.

  • ಕಾಯಿದೆಯ ಪ್ರಕಾರ ಸೆಕ್ಷನ್ 12 ರ ಉಪವಿಭಾಗದ (4) ಷರತ್ತು (ಬಿ) ಅಡಿಯಲ್ಲಿ ನೋಂದಣಿ ಬಯಸುವ ವ್ಯಕ್ತಿಯು ಈ ಕೆಳಗಿನ ಷರತ್ತುಗಳಿಗೆ ಬದ್ಧರಾಗಿರಬೇಕು.
  • ವಿದೇಶಿ ದೇಣಿಗೆ ಪಡೆಯುವ ಎನ್​ಜಿಒಗಳು ಮೂರು ವರ್ಷಗಳ ಕಾಲ ಅಸ್ತಿತ್ವದಲ್ಲಿರಬೇಕು
  • ಈ ಮೂರು ವರ್ಷಗಳಲ್ಲಿ ಸ್ವಯಂಪ್ರೇರಿತ ಚಟುವಟಿಕೆಗಳಲ್ಲಿ ಸುಮಾರು 15 ಲಕ್ಷ ಹಣವನ್ನು ಆ ಎನ್​ಜಿಒಗಳು ವ್ಯಯಿಸಿರಬೇಕು
  • ವಿದೇಶಿ ದೇಣಿಗೆಯನ್ನು ಸ್ವೀಕರಿಸುವ ಎನ್​ಜಿಒಗಳು ಎಫ್​ಸಿಆರ್​ಎ ಖಾತೆ ಕಡ್ಡಾಯವಾಗಿ ಹೊಂದರಬೇಕು
  • ನಿರ್ದಿಷ್ಟ ಚಟುವಟಿಕೆಗಳು ಅಥವಾ ಯೋಜನೆಗಳನ್ನು ನಿರ್ವಹಿಸಲು ವಿದೇಶಿ ದಾನಿಗಳಿಂದ ನಿರ್ದಿಷ್ಟ ಮೊತ್ತವನ್ನು ಸ್ವೀಕರಿಸಲು ಪೂರ್ವಾನುಮತಿ ಪಡೆಯುವ ವ್ಯಕ್ತಿಯು ಕೆಲವು ಮಾನದಂಡಗಳನ್ನು ಪೂರೈಸಬೇಕು
  • ದಾನಿ ನೀಡುವ ವಿದೇಶಿ ದೇಣಿಗೆಯ ಮೊತ್ತವನ್ನು ನಮೂದಿಸಬೇಕು ಮತ್ತು ಅದನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂಬುದನ್ನು ಉಲ್ಲೇಖಿಸಬೇಕು
  • ಭಾರತೀಯ ಸ್ವೀಕರಿಸುವ ವ್ಯಕ್ತಿಗಳು ಮತ್ತು ವಿದೇಶಿ ದಾನಿ ಸಂಸ್ಥೆಗಳು ಹೊಂದಿರುವ ಸಾಮಾನ್ಯ ಸದಸ್ಯರಿಗೆ ಭಾರತೀಯ ವ್ಯಕ್ತಿ ಅಥವಾ ಅಸ್ತಿತ್ವಕ್ಕೆ ಪೂರ್ವ ಅನುಮತಿ ನೀಡಲಾಗುವುದು.
  • ದೇಣಿಗೆ ಸ್ವೀಕರಿಸುವವರ ಮುಖ್ಯ ಕಾರ್ಯಕರ್ತ ದಾನಿಗಳ ಸಂಘಟನೆಯ ಭಾಗವಾಗಿರಬಾರದು ಎಂಬ ಷರತ್ತು ಪಾಲಿಸಬೇಕಾಗಿದೆ.
  • 75 ರಷ್ಟು ಪದಾಧಿಕಾರಿಗಳು ಅಥವಾ ಸ್ವೀಕರಿಸುವವರ ಆಡಳಿತ ಮಂಡಳಿಯ ಸದಸ್ಯರು ವಿದೇಶಿ ದಾನಿ ಸಂಸ್ಥೆಯ ಸದಸ್ಯರು ಅಥವಾ ಉದ್ಯೋಗಿಗಳಾಗಿರಬಾರದು.
  • ವಿದೇಶಿ ದಾನಿಗಳ ಸಂಘಟನೆಯು ಒಬ್ಬ ವ್ಯಕ್ತಿಯಾಗಿದ್ದರೆ, ಆ ವ್ಯಕ್ತಿಯು ಸ್ವೀಕರಿಸುವವರ ಗುಂಪಿನ ಮುಖ್ಯ ಕಾರ್ಯಕಾರಿಣಿ ಅಥವಾ ಪದಾಧಿಕಾರಿಗಳಾಗಿರಬಾರದು
  • ಶೇಕಡಾ 75 ರಷ್ಟು ಪದಾಧಿಕಾರಿಗಳು ಅಥವಾ ಸ್ವೀಕರಿಸುವವರ ಆಡಳಿತ ಮಂಡಳಿಯ ಸದಸ್ಯರ ಕುಟುಂಬದ ಸದಸ್ಯರು ಅಥವಾ ವಿದೇಶಿ ದಾನಿಗಳ ಹತ್ತಿರದ ಸಂಬಂಧಿಗಳಾಗಿರಬಾರದು ಎಂದು ಗೃಹ ಸಚಿವಾಲಯ ತಿಳಿಸಿದೆ.

ದೇಶದಲ್ಲಿ 2016-17 ಮತ್ತು 2018-19ರ ಅವಧಿಯಲ್ಲಿ ನೋಂದಾಯಿತ ಎನ್​ಜಿಒಗಳು 58,000 ಕೋಟಿ ರೂಪಾಯಿಗೂ ಅಧಿಕ ವಿದೇಶಿ ದೇಣಿಗೆ ಪಡೆದಿವೆ. ಸದ್ಯ ದೇಶದಲ್ಲಿ 22,400 ಎನ್​ಜಿಒಗಳು ಕೆಲಸ ಮಾಡುತ್ತಿವೆ.

ABOUT THE AUTHOR

...view details