ನವದೆಹಲಿ :ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳಲ್ಲಿ ಕನ್ನಡಕಗಳು ಅತ್ಯಂತ ಪ್ರಮುಖ ಅಂಶವಾಗಿರುವುದರಿಂದ ಕೋವಿಡ್ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರು ಬಳಸಿದ ಕನ್ನಡಕಗಳನ್ನು ಮರುಬಳಕೆ ಮಾಡಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಲಹೆ ನೀಡಿದೆ.
ಕೋವಿಡ್ ಕನ್ನಡಕಗಳನ್ನು ಮರುಬಳಕೆ ಮಾಡಿ: ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರ ಸಲಹೆ - ಕೋವಿಡ್ ಕನ್ನಡಕಗಳನ್ನು ಮರುಬಳಕೆ ಮಾಡಲು ಸಲಹೆ
ಕೋವಿಡ್ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರು ಬಳಸಿದ ಕನ್ನಡಕಗಳನ್ನು ಮರುಬಳಕೆ ಮಾಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಲಹೆ ನೀಡಿದೆ.
ಪಿಐಬಿಯ ಮಹಾರಾಷ್ಟ್ರ ಘಟಕವು ಟ್ವಿಟರ್‌ನಲ್ಲಿ ಈ ಬಗ್ಗೆ ಸಲಹೆಗಳನ್ನು ನೀಡಿದ್ದು, ಆರೋಗ್ಯ ಕಾರ್ಯಕರ್ತರು ಕನ್ನಡಕಗಳನ್ನು ಅದು ಹಾನಿಗೊಳಗಾಗುವವರೆಗೆ ಅಥವಾ ಅಸ್ಪಷ್ಟವಾಗುವವರೆಗೆ ದಿನಕ್ಕೆ ಕನಿಷ್ಠ ಐದು ಬಾರಿ ಮರುಬಳಕೆ ಮಾಡಲು ಸೂಚಿಸಿದೆ. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ನಲ್ಲಿ, ನಿಗದಿತ ಇಎನ್ / ಬಿಐಎಸ್ ಮಾನದಂಡಗಳಿಗೆ ಅನುಗುಣವಾಗಿ ಕನ್ನಡಕಗಳನ್ನು ಪರಿಶೀಲಿಸಿ ನಂತರ ಮರು ಬಳಕೆ ಮಾಡುವಂತೆ ಸೂಚಿಸಿದೆ.
ಕನ್ನಡಗಳನ್ನು ಮರುಬಳಕೆ ಮಾಡುವಾಗ ಪ್ರತಿಯೊಬ್ಬರು ತಮ್ಮ ಸ್ವಂತದವುಗಳನ್ನೇ ಬಳಸಬೇಕು. ಪ್ರತೀ ಬಳಕೆಯ ನಂತರ ಅದನ್ನು ಮತ್ತೆ ಬಳಸುವ ಮೊದಲು ಮರು ಸಂಸ್ಕರಣೆ ಮಾಡಬೇಕು. ಕೈಗೆ ಗ್ಲೌಸ್ ಹಾಕಿ ಸೋಪ್ ನೀರಿನಿಂದ ಕನ್ನಡಕಗಳನ್ನು ತೊಳೆಯಬೇಕು ಬಳಿಕ ಹತ್ತು ನಿಮಿಷಗಳ ಕಾಲ ಅದನ್ನು ಒಂದು ಶೇಕಡಾ ಸೋಡಿಯಂ ಹೈಪೋಕ್ಲೋರೈಟ್‌ನಲ್ಲಿ ಮುಳುಗಿಸಬೇಕು ಬಳಿಕ ಶುದ್ದ ನೀರಿನಲ್ಲಿ ತೊಳೆಯಬೇಕು ಎಂದು ಸಲಹೆ ನೀಡಿದೆ.