ಕರ್ನಾಟಕ

karnataka

ETV Bharat / bharat

'ಹೌಡಿ-ಮೋದಿ' ಕಾರ್ಯಕ್ರಮಕ್ಕಾಗಿ ಸರ್ಕಾರ ಯಾವುದೇ ಖರ್ಚು ಮಾಡಿಲ್ಲ: ಕೇಂದ್ರದ ಸ್ಪಷ್ಟನೆ - ಹೋಸ್ಟನ್ ಹೌಡಿ-ಮೋದಿ

ಕಳೆದ ವರ್ಷ ಅಮೆರಿಕದ ಹೋಸ್ಟನ್‌ನನಲ್ಲಿ ನಡೆದ ಹೌಡಿ-ಮೋದಿ ಕಾರ್ಯಕ್ರಮಕ್ಕಾಗಿ ಸರ್ಕಾರವು ಯಾವುದೇ ಹಣಕಾಸಿನ ವೆಚ್ಚವನ್ನು ಭರಿಸಿಲ್ಲ. ಅಥವಾ ಅದರ ಸಂಘಟಕರಿಗೆ ಧನಸಹಾಯ ನೀಡಿಲ್ಲವೆಂದು ಲೋಕಸಭೆಯಲ್ಲಿ ಸಚಿವ ವಿ ಮುರಳೀಧರನ್ ಸ್ಪಷ್ಟಪಡಿಸಿದರು.

Howdy-Modi
ಹೌಡಿ-ಮೋದಿ

By

Published : Sep 17, 2020, 5:20 PM IST

ನವದೆಹಲಿ: ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಹೋಸ್ಟನ್‌ನಲ್ಲಿ ನಡೆದ 'ಹೌಡಿ-ಮೋದಿ' ಕಾರ್ಯಕ್ರಮಕ್ಕಾಗಿ ಭಾರತವು ಯಾವುದೇ ಖರ್ಚು ಮಾಡಿಲ್ಲವೆಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

2019 ರ ಸೆಪ್ಟೆಂಬರ್ 22 ರಂದು ಅಮೆರಿಕದ ಹೋಸ್ಟನ್‌ನ ಕ್ರೀಡಾಂಗಣದಲ್ಲಿ 'ಹೌಡಿ-ಮೋದಿ' ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಕಾರ್ಯಕ್ರಮದ ಮೂಲಕ ಮೋದಿಗೆ ಅಮೆರಿಕ ಭವ್ಯ ಸ್ವಾಗತ ನೀಡಿತ್ತು. ಅಷ್ಟೇ ಅಲ್ಲ, ಅಮೆರಿಕದಲ್ಲಿರುವ 50,000 ಕ್ಕೂ ಹೆಚ್ಚು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮೋದಿ ಮಾತನಾಡಿದ್ದರು.

ಅಮೆರಿಕ ಮೂಲದ ಲಾಭರಹಿತ ಸಂಸ್ಥೆಯಾದ ಟೆಕ್ಸಾಸ್ ಇಂಡಿಯಾ ಫೋರಂ, ಸೆಪ್ಟೆಂಬರ್ 22, 2019 ರಂದು ಹೋಸ್ಟನ್‌ನಲ್ಲಿ ಹೌಡಿ-ಮೋದಿ ಕಾರ್ಯಕ್ರಮವನ್ನು ಆಯೋಜಿಸಿತ್ತು ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಪಕ್ಷ ಕೇಳಿದ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ಕಾರ್ಯಕ್ರಮಕ್ಕಾಗಿ ಸರ್ಕಾರವು ಯಾವುದೇ ಹಣಕಾಸಿನ ವೆಚ್ಚವನ್ನು ಭರಿಸಿಲ್ಲ. ಅಥವಾ ಅದರ ಸಂಘಟಕರಿಗೆ ಧನಸಹಾಯ ನೀಡಿಲ್ಲ ಎಂದು ಪ್ರತಿಪಕ್ಷಗಳಿಗೆ ಸ್ಪಷ್ಟನೆ ನೀಡಿದರು.

ಪ್ರಧಾನಿಯವರ ಯುಎಸ್ ಭೇಟಿಯ ಭಾಗವಾಗಿ, ಸಂಘಟಕರ ಆಹ್ವಾನದ ಮೇರೆಗೆ ಆ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು. ಟೆಕ್ಸಾಸ್ ಇಂಡಿಯಾ ಫೋರಂ ಸಂಸ್ಥೆಯ ಅಧ್ಯಕ್ಷರು, ಟೆಕ್ಸಾಸ್ ಮೂಲದ ಭಾರತೀಯ ಸಮುದಾಯದ ಸದಸ್ಯ ಜುಗಲ್ ಮಲಾನಿ ಎಂದು ಮುರಳೀಧರನ್ ಸ್ಪಷ್ಟಪಡಿಸಿದರು.

ABOUT THE AUTHOR

...view details