ಕರ್ನಾಟಕ

karnataka

ETV Bharat / bharat

ರೆಮ್‌ಡೆಸಿವಿರ್‌ ಬಳಕೆಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ ಆರೋಗ್ಯ ಸಚಿವಾಲಯ - HEALTH MINISTRY

ಕೋವಿಡ್‌ ರೋಗಿಗಳಿಗೆ ರೆಮ್‌ಡೆಸಿವಿರ್‌ ಔಷಧವನ್ನು ಐದು ದಿನಗಳ ಕಾಲ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್ ಚಿಕಿತ್ಸಾ ಕೇಂದ್ರಗಳ ಸಿಬ್ಬಂದಿಗೆ ಸೂಚಿಸಿದೆ. ಈ ಮೊದಲು ಆರು ದಿನಗಳ ಕಾಲ ಔಷಧವನ್ನು ನೀಡಲಾಗುತ್ತಿತ್ತು. ಶುಕ್ರವಾರ ಔಷಧ ಬಳಕೆ ಕುರಿತು ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.

REMDESIVIR
ರೆಮ್‌ಡೆಸಿವಿರ್

By

Published : Jul 4, 2020, 5:19 AM IST

ನವದೆಹಲಿ: ಆರು ದಿನಗಳಿಂದ ಐದು ದಿನಗಳವರೆಗೆ ಮಧ್ಯಮ ಹಂತದ ಅನಾರೋಗ್ಯದ ಸ್ಥಿತಿಯಲ್ಲಿರುವ ಕೊರೊನಾ ವೈರಸ್ ರೋಗಿಗಳಿಗೆ ನೀಡಬೇಕಾದ ಆಂಟಿ ವೈರಲ್ ಡ್ರಗ್ ರಿಮೆಡಿಸಿವಿರ್ ಪ್ರಮಾಣವನ್ನು ಕೇಂದ್ರ ಆರೋಗ್ಯ ಸಚಿವಾಲಯ ಮತ್ತೆ ಪರಿಷ್ಕರಿಸಿದೆ.

ಕೋವಿಡ್‌ ರೋಗಿಗಳಿಗೆ ರೆಮ್‌ಡೆಸಿವಿರ್‌ ಔಷಧವನ್ನು ಐದು ದಿನಗಳ ಕಾಲ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್ ಚಿಕಿತ್ಸಾ ಕೇಂದ್ರಗಳ ಸಿಬ್ಬಂದಿಗೆ ಸೂಚಿಸಿದೆ. ಈ ಮೊದಲು ಆರು ದಿನಗಳ ಕಾಲ ಔಷಧವನ್ನು ನೀಡಲಾಗುತ್ತಿತ್ತು. ಶುಕ್ರವಾರ ಔಷಧ ಬಳಕೆ ಕುರಿತು ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುವ ಔಷಧಿಯನ್ನು ದಿನಕ್ಕೆ 200 ಮಿಗ್ರಾಂ ಪ್ರಮಾಣದಲ್ಲಿ ನೀಡಬೇಕು. ನಂತರ 100 ಮಿ.ಗ್ರಾಂ ಪ್ರತಿದಿನ ನಾಲ್ಕು ದಿನಗಳವರೆಗೆ (ಒಟ್ಟು ಐದು ದಿನಗಳು) ನೀಡಬೇಕು ಎಂದು ಹೊಸ ಚಿಕಿತ್ಸಾ ಪ್ರೋಟೋಕಾಲ್‌ನಲ್ಲಿ ತಿಳಿಸಿವೆ.

ಆರೋಗ್ಯ ತನಿಖಾ ಸಚಿವಾಲಯವು ಜೂನ್ 13ರಂದು "ತನಿಖಾ ಚಿಕಿತ್ಸೆಗಳ" ಅಡಿಯಲ್ಲಿ ಮಧ್ಯಮ ಪ್ರಕರಣಗಳಲ್ಲಿ ನಿರ್ಬಂಧಿತ ತುರ್ತು ಬಳಕೆಗಾಗಿ ರೆಮೆಡಿಸಿವಿರ್ ಅನ್ನು ಬಳಸಲು ಅನುಮತಿ ನೀಡಿತ್ತು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರೆಮ್‌ಡೆಸಿವಿರ್‌ ಬಳಸಬಹುದು. ಆದರೆ, ಗರ್ಭಿಣಿಯರಿಗೆ ಮತ್ತು ಎದೆ ಹಾಲುಣಿಸುವವರಿಗೆ ಹಾಗೂ 12 ವರ್ಷದ ಒಳಗಿನವರಿಗೆ ಈ ಔಷಧ ಬಳಸಲು ಶಿಫಾರಸು ಮಾಡಬಾರದು ಎಂದು ಸಚಿವಾಲಯ ತಾಕೀತು ಮಾಡಿದೆ.

ABOUT THE AUTHOR

...view details