ಕರ್ನಾಟಕ

karnataka

By

Published : Sep 11, 2020, 6:18 PM IST

ETV Bharat / bharat

ಕೇಂದ್ರದಿಂದ 14 ರಾಜ್ಯಗಳಿಗೆ 6,195 ಕೋಟಿ ರೂ. ಅನುದಾನ, ಕರ್ನಾಟಕಕ್ಕೆ ಸಿಗದ ಪ್ಯಾಕೇಜ್​!

ಕರ್ನಾಟಕ ಹೊರತುಪಡಿಸಿ 14 ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ರಿಲೀಸ್​ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ನಿರ್ಮಲಾ ಸೀತಾರಾಮನ್​ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

Nirmala Sitharaman
Nirmala Sitharaman

ನವದೆಹಲಿ:ಮಹಾಮಾರಿ ಕೊರೊನಾ ವೈರಸ್​​ ಬಿಕ್ಕಟ್ಟು ಸಂದರ್ಭದಲ್ಲಿ ಆದಾಯ ಕೊರತೆ ಸಮಸ್ಯೆ ಎದುರಿಸುತ್ತಿರುವ 14 ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಮ್ಮ ಟ್ವೀಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಒಟ್ಟು 14 ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ರಿಲೀಸ್​​ ಆಗಿದ್ದು, 15ನೇ ಹಣಕಾಸು ಸಚಿವಾಲಯ ಈ ಕುರಿತು ಶಿಫಾರಸು ಮಾಡಿತ್ತು. ಆದರೆ ಕರ್ನಾಟಕಕ್ಕೆ ಯಾವುದೇ ಅನುದಾನ ರಿಲೀಸ್​​ ಆಗಿಲ್ಲ.

ಆದಾಯ ಹಂಚಿಕೆ ಕೊರತೆ ಎದುರಿಸುತ್ತಿರುವ ಕಾರಣ ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡುವಂತೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಅದರಂತೆ ಕೇಂದ್ರ ಇದೀಗ 6ನೇ ಕಂತು ರಿಲೀಸ್​ ಮಾಡಿದೆ.

ಯಾವ ರಾಜ್ಯಕ್ಕೆ ಎಷ್ಟು ಅನುದಾನ?

1. ಆಂಧ್ರಪ್ರದೇಶ - 491.41 ಕೋಟಿ ರೂ.

2. ಅಸ್ಸಾಂ- 631.58 ಕೋಟಿ ರೂ.

3. ಹಿಮಾಚಲ ಪ್ರದೇಶ - 952.58 ಕೋಟಿ ರೂ.

4. ಕೇರಳ- 1276.91 ಕೋಟಿ ರೂ.

5. ಮಣಿಪುರ- 235.33 ಕೋಟಿ ರೂ.

6. ಮೇಘಾಲಯ- 40.91 ಕೋಟಿ ರೂ.

7. ಮಿಜೋರಾಂ- 118.50 ಕೋಟಿ ರೂ.

8. ನಾಗಾಲ್ಯಾಂಡ್- 326.41 ಕೋಟಿ ರೂ.

9. ಪಂಜಾಬ್- 638.25 ಕೋಟಿ ರೂ.

10. ತಮಿಳುನಾಡು- 335.41 ಕೋಟಿ ರೂ.

11. ತ್ರಿಪುರ- 269.66 ಕೋಟಿ ರೂ.

12. ಉತ್ತರಾಖಂಡ- 423.00 ಕೋಟಿ ರೂ.

13. ಪಶ್ಚಿಮ ಬಂಗಾಳ- 417.75 ಕೋಟಿ ರೂ.

14. ಸಿಕ್ಕಿಂ- 37.33 ಕೋಟಿ ರೂ. ಪ್ರಸಕ್ತ ಹಣಕಾಸು ವರ್ಷ ಏಪ್ರಿಲ್​​-ಆಗಸ್ಟ್​​ ತಿಂಗಳಲ್ಲಿ ಕೇಂದ್ರ ಸರ್ಕಾರ ಅನುದಾನ ರಿಲೀಸ್​ ಮಾಡಿತ್ತು.

ABOUT THE AUTHOR

...view details