ಕರ್ನಾಟಕ

karnataka

ETV Bharat / bharat

ಹೀಗಿದೆ ನೋಡಿ ನೂತನ ಕೇಂದ್ರಾಡಳಿತ ಪ್ರದೇಶಗಳ ನಕ್ಷೆ - ನೂತನ ಕೇಂದ್ರಾಡಳಿತ ಪ್ರದೇಶಗಳ ನಕಾಶೆ

ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ನಕ್ಷೆಯನ್ನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ನೂತನ ಕೇಂದ್ರಾಡಳಿತ ಪ್ರದೇಶಗಳ ನಕ್ಷೆ

By

Published : Nov 2, 2019, 8:08 PM IST

ನವದೆಹಲಿ: ನೂತನವಾಗಿ ರಚಿಸಲ್ಪಟ್ಟ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ನಕ್ಷೆಯನ್ನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಕೇಂದ್ರ ಗೃಹ ಸಚಿವಾಲಯ ತಿಳಿಸಿರುವಂತೆ ಕಾರ್ಗಿಲ್​ ಮತ್ತು ಲೆಹ್ ಜಿಲ್ಲೆಗಳು ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿಕೊಂಡರೆ, ಉಳಿದ ಭಾಗ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸೇರ್ಪಡೆಗೊಂಡಿದೆ.

2019ರ ಅಕ್ಟೋಬರ್ 31ರಂದು ರಚನೆಯಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ನೂತ ನಕ್ಷೆಯನ್ನ ಸರ್ವೆ ಜನರಲ್ ಆಫ್ ಇಂಡಿಯಾ ಸಿದ್ಧಪಡಿಸಿದೆ. ಭಾರತದ ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ ಸರ್ದಾರ್​ ವಲ್ಲಭಭಾಯ್​ ಪಟೇಲರ 144ನೇ ಜಯಂತಿಯಂದೇ ನೂತನ ಕೇಂದ್ರಾಡಳಿತ ಪ್ರದೇಶಗಳ ಜನನವಾಗಿದೆ.

ABOUT THE AUTHOR

...view details