ಕರ್ನಾಟಕ

karnataka

ETV Bharat / bharat

ಕೋವಿಡ್​ ಲಸಿಕೆ ನೀಡಲು ಕೇಂದ್ರದಿಂದ ಮಾರ್ಗಸೂಚಿ ಪ್ರಕಟ - ಕೋವಿಡ್​ ಲಸಿಕೆ ಪಡೆಯಲು ನೋಂದಣಿ ಕಡ್ಡಾಯ

ಕೊರೊನಾ ಲಸಿಕೆಯ ಸಾಮೂಹಿಕ ವ್ಯಾಕ್ಸಿನೇಷನ್​ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಮೊದಲ ಹಂತದಲ್ಲಿ 30 ಕೋಟಿ ಮಂದಿಗೆ ಲಸಿಕೆ ನೀಡಲು ನಿರ್ಧರಿಸಿದೆ.

mass vaccination
ಕೋವಿಡ್​ ಲಸಿಕೆ

By

Published : Dec 15, 2020, 11:49 AM IST

ನವದೆಹಲಿ: ಭಾರತದಲ್ಲಿ ಶೀಘ್ರದಲ್ಲೇ ಕೊರೊನಾ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ. ಇದೀಗ ಸಾಮೂಹಿಕ ವ್ಯಾಕ್ಸಿನೇಷನ್​ಗೆ ಕೇಂದ್ರ ಸರ್ಕಾರ ವಿವರವಾದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಕೋವಿಡ್​ ಲಸಿಕೆ ಪಡೆಯಲು ನೋಂದಣಿ ಕಡ್ಡಾಯವಾಗಿದೆ. ಮುಂಗಡವಾಗಿ ನೋಂದಾಯಿಸಿಕೊಂಡವರಿಗೆ ಮಾತ್ರ ಲಸಿಕೆ ಸಿಗುತ್ತದೆ. ನೋಂದಣಿ ಮಾಡಿಕೊಳ್ಳದೆ ನೇರವಾಗಿ ಲಸಿಕೆ ಕೇಂದ್ರಕ್ಕೆ ಬಂದವರಿಗೆ ನೀಡಲಾಗುವುದಿಲ್ಲ ಎಂಬುದನ್ನು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಲಸಿಕೆಯ ತುರ್ತು ಬಳಕೆಗೆ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡುತ್ತಿದ್ದಂತೆಯೇ ಇದು ಜಾರಿಗೆ ಬರಲಿದೆ.

ಓದಿ:ಅಮೆರಿಕದಲ್ಲಿ ಮೊದಲ ಕೊರೊನಾ ಲಸಿಕೆ ಪಡೆದ ನ್ಯೂಯಾರ್ಕ್ ನರ್ಸ್

ಈಗಾಗಲೇ ಆರೊಗ್ಯ ಇಲಾಖೆ ಮೊದಲ ಹಂತದಲ್ಲಿ ದೇಶದ 30 ಕೋಟಿ ಜನರನ್ನು ಲಸಿಕೆಗೆ ಒಳಪಡಿಸಲು ಗುರುತಿಸಿದೆ. ಇವರಲ್ಲಿ ಒಂದು ಕೋಟಿ ಆರೋಗ್ಯ ಕಾರ್ಯಕರ್ತರು, ವಿವಿಧ ಕ್ಷೇತ್ರಗಳಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ 2 ಕೋಟಿ ಸಿಬ್ಬಂದಿ ಹಾಗೂ 20 ಕೋಟಿ ಸಾಮಾನ್ಯ ಜನರನ್ನು ತಜ್ಞರ ತಂಡ ನಿಗದಿ ಪಡಿಸಿದೆ.

ಮಾರ್ಗಸೂಚಿಗಳು ಇಂತಿವೆ:

  • ಲಸಿಕೆ ಪಡೆಯಲು Co-WIN (ಕೋವಿಡ್‌ ವ್ಯಾಕ್ಸಿನ್‌ ಇಂಟೆಲಿಜೆನ್ಸ್‌ ನೆಟ್‌ವರ್ಕ್‌) ವೆಬ್​ಸೈಟ್​ನಲ್ಲಿ ನೋಂದಣಿ
  • ಭಾವಚಿತ್ರವಿರುವ ದಾಖಲೆ ಬಳಸಿ ನೋಂದಣಿ
  • ಮೊದಲ ಹಂತದಲ್ಲಿ 30 ಕೋಟಿ ಮಂದಿಗೆ ವ್ಯಾಕ್ಸಿನ್​​
  • ಪ್ರತಿ ದಿನದ ಒಂದು ಅವಧಿಯಲ್ಲಿ 100 ರಿಂದ 200 ಜನರಿಗೆ ಲಸಿಕೆ ನೀಡಬಹುದು
  • 30 ನಿಮಿಷಗಳ ಕಾಲ ಲಸಿಕೆ ಹಾಕಿಸಿಕೊಂಡವರ ಮೇಲೆ ನಿಗಾ ವಹಿಸಬೇಕು
  • ಲಸಿಕಾ ಕೇಂದ್ರದಲ್ಲಿ 5 ಜನರ ತಂಡ ನಿಯೋಜನೆ
  • ಮಾಹಿತಿ ಸಂಗ್ರಹ ಜಾಲವನ್ನು ಬಳಸಿ ಕೋವಿಡ್ ಲಸಿಕೆ ಫಲಾನುಭವಿಗಳನ್ನು ಪತ್ತೆಹಚ್ಚುವುದು
  • ಲಸಿಕೆ ಇಟ್ಟಿರುವ ಪೆಟ್ಟಿಗೆಗೆ ನೇರವಾಗಿ ಸೂರ್ಯನ ಬೆಳಕು ತಗುಲದಂತೆ ನೋಡಿಕೊಳ್ಳಬೇಕು

ಇನ್ನು ಗುರುತಿನ ಚೀಟಿ, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಾಸ್‌ಪೋರ್ಟ್ ಮತ್ತು ಪಿಂಚಣಿ ದಾಖಲೆ ಸೇರಿದಂತೆ ಭಾವಚಿತ್ರವಿರುವ 12 ದಾಖಲೆಗಳನ್ನು ಪಟ್ಟಿಮಾಡಲಾಗಿದ್ದು, ಯಾವುದಾದರೂ ಒಂದನ್ನು ಬಳಸಿ Co-WIN ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಮತದಾರರ ಗುರುತಿನ ಚೀಟಿ ಅಗತ್ಯವಾಗಿರುತ್ತದೆ. ಕೋವಿಡ್ -19 ಲಸಿಕೆಯ ಲೇಬಲ್‌ನಲ್ಲಿ ಅವಧಿ ಮುಕ್ತಾಯದ ದಿನಾಂಕಗಳು ಇಲ್ಲದಿದ್ದಲ್ಲಿ ಲಸಿಕೆ ಹಾಕುವವರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details