ಕರ್ನಾಟಕ

karnataka

ETV Bharat / bharat

ಕೋವಿಡ್​ ಲಸಿಕೆ ಎಲ್ಲಾ ಜನರ ಬಳಿ ತಲುಪಲು ಯಾವ ರೀತಿ ತಂತ್ರ ರೂಪಿಸಿದ್ದೀರಿ: ರಾಹುಲ್​ ಪ್ರಶ್ನೆ - ಕೊರೊನಾಗೆ ಫಿಜರ್​ ಕಂಪೆನಿಯಿಂದ ಲಸಿಕೆ ಸುದ್ದಿ

ಕೊರೊನಾ ನಿಯಂತ್ರಿಸುವಲ್ಲಿ ತಮ್ಮ ಕಂಪನಿ ತಯಾರಿಸಿರುವ ಲಸಿಕೆ ಶೇ,90 ರಷ್ಟು ಪರಿಣಾಮಕಾರಿ ಎಂದು ಫಿಜರ್​ ಇಂಗ್​ ಮತ್ತು ಬಯೋಟೆಕ್​ ಎಸ್​​ಇ ಹೇಳಿಕೊಂಡ ನಂತರ ರಾಹುಲ್​ ಗಾಂಧಿ ಈ ಕುರಿತು ಸರ್ಕಾರದ ಬಳಿ ವಿವರಣೆ ಕೇಳಿದ್ದಾರೆ..

Rahul Gandhi
ರಾಹುಲ್​ ಪ್ರಶ್ನೆ

By

Published : Nov 11, 2020, 1:53 PM IST

ನವದೆಹಲಿ: ಪ್ರತಿಯೊಬ್ಬ ಭಾರತೀಯನಿಗೂ ಕೋವಿಡ್​ -19 ಲಸಿಕೆ ತಲುಪುವಂತೆ ಮಾಡಲು ಯಾವ ಬಗೆಯ ಕಾರ್ಯತಂತ್ರ ರೂಪಿಸಲಾಗಿದೆ ಎಂಬುದನ್ನು ಕುರಿತು ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್​ ಗಾಂಧಿ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ರಾಹುಲ್​ ಗಾಂಧಿ, ಕೊರೊನಾ ನಿಯಂತ್ರಿಸುವಲ್ಲಿ ತಮ್ಮ ಕಂಪನಿ ತಯಾರಿಸಿರುವ ಲಸಿಕೆ ಶೇ,90 ರಷ್ಟು ಪರಿಣಾಮಕಾರಿ ಎಂದು ಫಿಜರ್​ ಇಂಗ್​ ಮತ್ತು ಬಯೋಟೆಕ್​ ಎಸ್​​ಇ ಹೇಳಿಕೊಂಡ ನಂತರ ರಾಹುಲ್​ ಗಾಂಧಿ ಈ ಕುರಿತು ಸರ್ಕಾರದ ಬಳಿ ವಿವರಣೆ ಕೇಳಿದ್ದಾರೆ.

ಇನ್ನು ಟ್ವೀಟ್​ನಲ್ಲಿ ರಾಹುಲ್​ ಕಂಪನಿ ಈ ಲಸಿಕೆ ಕಂಡು ಹಿಡಿದಿದ್ದರೂ ಅದು ಪ್ರತಿಯೊಬ್ಬ ಭಾರತೀಯನಿಗೂ ಲಭ್ಯವಾಗುವ ತಂತ್ರಗಾರಿಕೆ ರೂಪಿಸಿಬೇಕೆಂದು ಒತ್ತಾಯಿಸಿದ್ದಾರೆ. ಹಾಗೂ ಪ್ರತಿಯೊಬ್ಬ ಭಾರತೀಯನಿಗೂ ಅದು ಹೇಗೆ ತಲುಪುತ್ತದೆ ಎಂದು ಭಾರತ ಸರ್ಕಾರ ಲಸಿಕೆ ವಿತರಣಾ ಕಾರ್ಯತಂತ್ರವನ್ನು ವ್ಯಾಖ್ಯಾನಿಸಬೇಕು ಎಂದು ರಾಹುಲ್​​ ಗಾಂಧಿ ಹೇಳಿದ್ದಾರೆ.

ಅವರು ತಮ್ಮ ಟ್ವೀಟ್‌ನೊಂದಿಗೆ ಫಿಜರ್​ನ ಮಾಧ್ಯಮ ವರದಿಯನ್ನು ಲಗತ್ತಿಸಿದ್ದಾರೆ. ಜೊತೆಗೆ ಆ ಲಸಿಕೆಯನ್ನು ಸಾಗಿಸಲು ಮೈನಸ್ 70 ಡಿಗ್ರಿ ತಾಪಮಾನದ ಕೋಲ್ಡ್ ಚೈನ್ ಲಾಜಿಸ್ಟಿಕ್ ( ಶೀತಲಗೃಹ ಸರಪಳಿ) ಬೇಕು. ಆದರೆ, ನಮ್ಮ ದೇಶದಲ್ಲಿ ಸದ್ಯ ಯಾವ ಕಂಪನಿಯಲ್ಲೂ ಇಂಥ ಸೌಲಭ್ಯವಿಲ್ಲ ಎಂದು ಅವರು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ABOUT THE AUTHOR

...view details