ಕರ್ನಾಟಕ

karnataka

ETV Bharat / bharat

ದೇಶೀ ಕಂಪನಿಗಳ ಮೇಲೆ ಹಿಡಿತ ಸಾಧಿಸಲು ವಿದೇಶಗಳಿಗೆ ಅನುಮತಿ ಬೇಡ; ಕೇಂದ್ರಕ್ಕೆ ರಾಗಾ ಸಲಹೆ - Rahul gandhi tweets

ಹಲವು ದೇಶೀ ಕಂಪನಿಗಳನ್ನು ಆರ್ಥಿಕ ಕುಸಿತವು ದುರ್ಬಲಗೊಳಿಸಿದೆ. ಹೀಗಾಗಿ ವಿದೇಶೀ ಕಂಪನಿಗಳಿಂದ ದೇಶೀಯ ಕಂಪನಿಗಳು ಸ್ವಾಧೀನಕ್ಕೆ ಒಳಗಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಯಾವುದೇ ಭಾರತೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ವಿದೇಶಿ ಹಿತಾಸಕ್ತಿಗಳಿಗೆ ಸರ್ಕಾರ ಅನುಮತಿ ನೀಡಬಾರದು ಎಂದು ರಾಹುಲ್​ ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.

Rahul gandhi
ರಾಹುಲ್​ ಗಾಂಧಿ

By

Published : Apr 13, 2020, 1:23 PM IST

ನವದೆಹಲಿ:ಕೊರೊನಾ ಲಕ್​ಡೌನ್​ನಿಂದಾಗಿ ಸೃಷ್ಟಿಯಾದ ಭಾರಿ ಆರ್ಥಿಕ ಕುಸಿತವು ಅನೇಕ ಭಾರತೀಯ ಕಾರ್ಪೊರೇಟ್‌ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ. ಇದು ವಿದೇಶೀ ಕೈಗಳಿಗೆ ಸ್ವಾಧೀನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ರಾಹುಲ್​ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಕಾಂಗ್ರೆಸ್​ ನಾಯಕ, ಹಲವು ದೇಶೀ ಕಂಪನಿಗಳನ್ನು ಆರ್ಥಿಕ ಕುಸಿತವು ದುರ್ಬಲಗೊಳಿಸಿದೆ. ಹೀಗಾಗಿ ವಿದೇಶೀ ಕಂಪನಿಗಳಿಂದ ದೇಶೀಯ ಕಂಪನಿಗಳು ಸ್ವಾಧೀನಕ್ಕೆ ಒಳಗಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಯಾವುದೇ ಭಾರತೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ವಿದೇಶಿ ಹಿತಾಸಕ್ತಿಗಳಿಗೆ ಸರ್ಕಾರ ಅನುಮತಿ ನೀಡಬಾರದು ಎಂದು ರಾಹುಲ್​ ಸಲಹೆ ನೀಡಿದ್ದಾರೆ.

ABOUT THE AUTHOR

...view details