ನವದೆಹಲಿ:ಕೋವಿಡ್ -19 ಹಿನ್ನೆಲೆ ಭಾರತದಲ್ಲೇ ಸಿಲುಕಿರುವ ವಿದೇಶಿ ಪ್ರಜೆಗಳ, ರೆಗ್ಯೂಲರ್ ವೀಸಾ ಮತ್ತು ಇ- ವೀಸಾವನ್ನು ಏಪ್ರಿಲ್ 30ರವರೆಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ವಿದೇಶಿಗರ ವೀಸಾ ಅವಧಿ ಏ. 30ರ ವರೆಗೆ ವಿಸ್ತರಣೆ: ಕೇಂದ್ರ ಸರ್ಕಾರದ ನಿರ್ಧಾರ - ಕೇಂದ್ರ ಗೃಹ ಸಚಿವಾಲ
ಕೊರೊನಾ ಭೀತಿಯಿಂದ ದೇಶಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ಹಲವಾರು ವಿದೇಶಿಗರು ಭಾರತದಲ್ಲೇ ಸಿಲುಕಿಕೊಂಡಿದ್ದಾರೆ. ಅವರ ವೀಸಾ ಅವಧಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ವೀಸಾ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ
ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಸಲುವಾಗಿ, ಮಾರ್ಚ್ 24 ರಂದು 21 ದಿನಗಳ ಲಾಕ್ಡೌನ್ ಘೋಷಿಸಲಾಗಿತ್ತು. ಈ ವೇಳೆ ವಿದೇಶಿ ಪ್ರಜೆಗಳು ದೇಶದಲ್ಲೇ ಸಿಲುಕಿಕೊಂಡಿದ್ದಾರೆ.
ವಿದೇಶಿ ಪ್ರಜೆಗಳ ನಿಯಮಿತ ವೀಸಾ, ಇ- ವೀಸಾ ಹಾಗೂ ವಿದೇಶಿ ಪ್ರಯಾಣದ ಮೇಲೆ ವಿಧಿಸಿರುವ ಷರತ್ತುಗಳಿಂದ ವಿದೇಶಿಗರು ಭಾರತದಲ್ಲೇ ಸಿಲುಕಿಕೊಂಡಿದ್ದಾರೆ. ವೀಸಾ ಅವಧಿ ಫೆ.1ಕ್ಕೆ ಮುಕ್ತಾಯಗೊಂಡಿದ್ದರೇ, ಅದನ್ನು ಏ. 30ರ ವರೆಗೆ ವಿಸ್ತರಣೆ ಮಾಡಲಾಗುತ್ತದೆ. ಇದಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ ಗ್ರ್ಯಾಟಿಸ್ ಆಧಾರದ ಮೇಲೆ ಏಪ್ರಿಲ್ 30 (ಮಿಡ್ನೈಟ್) ವರೆಗೆ ವಿಸ್ತರಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.