ಕರ್ನಾಟಕ

karnataka

ETV Bharat / bharat

ಏರ್ ಇಂಡಿಯಾ ಮಾರಾಟ:  ಬಿಡ್​​​ಗೆ ಗಡುವು ವಿಸ್ತರಿಸಿದ ಕೇಂದ್ರ - Govt extends deadline to bid for Air India

ಏರ್ ಇಂಡಿಯಾದಲ್ಲಿ ಶೇ. 100 ರಷ್ಟು ಪಾಲು ಖರೀದಿಸಲು ಬಿಡ್ ಸಲ್ಲಿಸುವ ಗಡುವನ್ನ ಸರ್ಕಾರ ಮಂಗಳವಾರ ಜೂನ್ 30 ರವರೆಗೆ ವಿಸ್ತರಿಸಿದೆ.

ಏರ್ ಇಂಡಿಯಾ ಮಾರಾಟ
ಏರ್ ಇಂಡಿಯಾ ಮಾರಾಟ

By

Published : Apr 28, 2020, 8:28 PM IST

ನವದೆಹಲಿ: ಕೊರೊನಾ ವೈರಸ್​ ಭೀತಿಯಿಂದ ಲಾಕ್​ಡೌನ್​ ಮಾಡಿರುವ ಕಾರಣ ಏರ್​ ಇಂಡಿಯಾದ ಶೇ.100ರಷ್ಟು ಪಾಲನ್ನು ಖರೀದಿಸಲು ಸಲ್ಲಿಸುವ ಬಿಡ್​​ನ ಗಡುವನ್ನು ಕೇಂದ್ರ ಸರ್ಕಾರ ಜೂನ್​. 30ರವರೆಗೆ ಮಂಗಳವಾರ ವಿಸ್ತರಿಸಿದೆ.​

ಈ ಗಡುವನ್ನು ಮೊದಲು ಏಪ್ರಿಲ್ 30ಕ್ಕೆ ನಿಗದಿಪಡಿಸಲಾಗಿತ್ತು. ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (ಡಿಐಪಿಎಎಂ) ಅಧಿಸೂಚನೆಯಲ್ಲಿ "ಐಬಿಗಳು (ಆಸಕ್ತ ಬಿಡ್​​ದಾರರ) ವಿನಂತಿಯ ಮೇರೆಗೆ ಮತ್ತು ಕೋವಿಡ್​​ -19 ನಿಂದ ಉಂಟಾದ ಪರಿಸ್ಥಿತಿಗಳ ದೃಷ್ಟಿಯಿಂದ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.

2018 ರಲ್ಲಿ ಏರ್ ಇಂಡಿಯಾವನ್ನು ಮಾರಾಟ ಮಾಡುವ ವಿಫಲ ಪ್ರಯತ್ನದ ನಂತರ, ಸರ್ಕಾರವು 2020 ರ ಜನವರಿಯಲ್ಲಿ ಏರ್ ಇಂಡಿಯಾದ ಮಾರಾಟ ಪ್ರಕ್ರಿಯೆಯನ್ನು ಪುನಾರಂಭಿಸಿತ್ತು. ಏರ್ ಇಂಡಿಯಾದ ನೂರು ಪ್ರತಿಶತದಷ್ಟು ಷೇರುಗಳನ್ನು ಒಳಗೊಂಡಂತೆ, ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯಲ್ಲಿ ತನ್ನ ನೂರು ಪ್ರತಿಶತದಷ್ಟು ಷೇರುಗಳನ್ನು ಮಾರಾಟ ಮಾಡಲು ಬಿಡ್ ಆಹ್ವಾನಿಸಿತ್ತು.

ಫೆಬ್ರವರಿ 21 ರಂದು, ಇದು ‘ಗೌಪ್ಯತೆ ಕೈಗೊಳ್ಳುವಿಕೆಯ’ ಕುರಿತ ಪ್ರಶ್ನೆಗಳಿಗೆ ಉತ್ತರಿಸುವ ಮೊದಲ ಸ್ಪಷ್ಟೀಕರಣವನ್ನು ನೀಡಿತು. ಏರ್ ಇಂಡಿಯಾದ ಆಸಕ್ತ ಬಿಡ್​​ದಾರರ ನಿವ್ವಳ ಮೌಲ್ಯ, 500 - 3,500 ಕೋಟಿ ಇರಬೇಕು.

ಮಾರ್ಚ್ 31, 2019 ರ ವೇಳೆಗೆ ಒಟ್ಟು 60,074 ಕೋಟಿ ರೂ.ಗಳ ಸಾಲದಲ್ಲಿ, ಖರೀದಿದಾರರು 23,286.5 ಕೋಟಿ ರೂ.ಗಳನ್ನು ನೀಡಬೇಕು, ಉಳಿದ ಹಣವನ್ನು ವಿಶೇಷ ಉದ್ದೇಶದ ವಾಹನವಾದ ಏರ್ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಲಿಮಿಟೆಡ್ (ಎಐಎಹೆಚ್ಎಲ್) ಗೆ ವರ್ಗಾಯಿಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಇತ್ತೀಚೆಗೆ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಗೆ ತಿದ್ದುಪಡಿ ತರಲು ಅನುಮೋದನೆ ನೀಡಿತ್ತು. ಏರ್‌ ಇಂಡಿಯಾದಲ್ಲಿ ಎನ್‌ಆರ್‌ಐಗಳು ಸ್ವಯಂಚಾಲಿತ ಮಾರ್ಗದಲ್ಲಿ ಶೇ 100ರ ವರೆಗಿನ ಎಫ್‌ಡಿಐಗಳನ್ನು ಅನುಮತಿಸುತ್ತದೆ.

ಮಂತ್ರಿ ಸಮಿತಿ- ಏರ್ ಇಂಡಿಯಾ ಸ್ಪೆಸಿಫಿಕ್ ಆಲ್ಟರ್ನೇಟಿವ್ ಮೆಕ್ಯಾನಿಸಮ್ (ಎಐಎಸ್ಎಎಂ) ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿದೆ ಮತ್ತು ಸಮಿತಿಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ವಾಣಿಜ್ಯ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಇದ್ದಾರೆ.

ABOUT THE AUTHOR

...view details