ಚೆನ್ನೈ:ದೇಶದ ಜನತೆಯಲ್ಲಿ ಸುರಕ್ಷತಾ ಮನೋಭಾವ ಬೆಳೆಸಲು ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಅವರು ಅತ್ಯುತ್ತಮ ಕೊಡುಗೆ ನೀಡುವತ್ತ ಸಹಕರಿಸಲು ಕೇಂದ್ರ ಸರ್ಕಾರವು ಬದ್ಧವಾಗಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮುಂಬೈ ದಾಳಿ ಮರುಕಳಿಸದಂತೆ ಕ್ರಮ.. ರಕ್ಷಣಾ ಸಚಿವ ರಾಜನಾಥ್ ಸಿಂಗ್ - ಕರಾವಳಿ ಕಾವಲು ಪಡೆ
ಮುಂಬೈ ದಾಳಿಯು ಸಮುದ್ರ ಮಾರ್ಗದ ಮೂಲಕ ನಡೆದಿತ್ತು. ಆದರೆ, ಈಗ ಇಂತಹ ಘಟನೆಗಳು ದೇಶದಲ್ಲಿ ಮರುಕಳಿಸದಂತೆ ಸರ್ಕಾರವು ಕಠಿಣ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಪದಕ ವಿತರಿಸಿ ಮಾತನಾಡಿದ ಅವರು, ಈ ಹಿಂದೆ ಮುಂಬೈ ದಾಳಿಯು ಸಮುದ್ರ ಮಾರ್ಗದ ಮೂಲಕ ನಡೆದಿತ್ತು. ಆದರೆ, ಈಗ ಇಂತಹ ಘಟನೆಗಳು ದೇಶದಲ್ಲಿ ಮರುಕಳಿಸದಂತೆ ಸರ್ಕಾರವು ಕಠಿಣ ಕ್ರಮ ಕೈಗೊಂಡಿದೆ. ಅಲ್ಲದೆ ರಾಜ್ಯೇತರ ಹಾಗೂ ರಾಜ್ಯ ಬೆಂಬಲಿತ ಭಯೋತ್ಪಾದನೆ ಹತ್ತಿಕ್ಕಲು ನಾವು ಬದ್ಧರಾಗಿದ್ದೇವೆ ಎಂದು ರಕ್ಷಣಾ ಸಚಿವರು ತಿಳಿಸಿದರು.
ಅಲ್ಲದೆ ರಾಷ್ಟ್ರಪತಿ ತತ್ರಕ್ಷಕ್ ಪದಕ ಹಾಗೂ ತತ್ರಕ್ಷಕ್ ಪದಕಗಳನ್ನು ನೀಡಲು ಚಿಂತಿಸಿದೆ. ಈ ಬಗ್ಗೆ ರಕ್ಷಣಾ ಸಚಿವಾಲಯದಿಂದ ಅನುಮೋದನೆ ಸಿಕ್ಕಿದ್ದು, ಪ್ರಧಾನಿ ಕಚೇರಿಗೆ ಒಪ್ಪಿಸಲಾಗಿದೆ ಎಂದು ಹೇಳಿದರು. ಈ ವೇಳೆ ಸಚಿವರು ಕೋಸ್ಟ್ ಗಾರ್ಡ್ ಆಫೀಸರ್ಗಳು ಹಾಗೂ ಸಿಬ್ಬಂದಿ ಸೇರಿದಂತೆ 61 ಪದಕಗಳನ್ನು ನೀಡಿ ಗೌರವಿಸಿದರು.