ಕರ್ನಾಟಕ

karnataka

ETV Bharat / bharat

’ವರ್ಷಾಂತ್ಯಕ್ಕೆ ಜಿಡಿಪಿ ಶೇ.5 ತಲುಪಿದರೆ ಅದೇ ನಮ್ಮ ಪುಣ್ಯ’:  ಪಿ.ಚಿದಂಬರಂ ವ್ಯಂಗ್ಯ - Govt clueless on economy, mulish in defending mistakes

ಅಕ್ರಮ ಹಣ ವರ್ಗಾವಣೆ ಹಾಗೂ ಐಎನ್​​ಎಕ್ಸ್ ಪ್ರಕರಣದಲ್ಲಿ ಜೈಲು ಸೇರಿ ನಿನ್ನೆ ಬಿಡುಗಡೆಯಾದ ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಇಂದು ಸುದ್ದಿಗೋಷ್ಠಿ ನಡೆಸಿದರು.

Govt clueless on economy, mulish in defending mistakes: Chidambaram
Govt clueless on economy, mulish in defending mistakes: Chidambaram

By

Published : Dec 5, 2019, 3:15 PM IST

Updated : Dec 5, 2019, 4:24 PM IST

ನವದೆಹಲಿ:ಅಕ್ರಮ ಹಣ ವರ್ಗಾವಣೆ ಹಾಗೂ ಐಎನ್​​ಎಕ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ನಿನ್ನೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರ ಬಂದ ಅವರು ಇಂದು ಸುದ್ದಿಗೋಷ್ಠಿ ನಡೆಸಿ, ದೇಶದ ಆರ್ಥಿಕತೆ ಕುಸಿತ ಹಾಗೂ ಮೋದಿ ಮೌನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ವರ್ಷದ ಅಂತ್ಯಕ್ಕೆ ಜಿಡಿಪಿ ಶೇ.5 ರಷ್ಟು ಮುಟ್ಟಿದರೆ ಅದು ನಮ್ಮ ಅದೃಷ್ಟ ಎಂದು ವ್ಯಂಗ್ಯವಾಡಿದ ಅವರು, ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕೆಟ್ಟ ನಿರ್ಧಾರಗಳಿಂದ ದೇಶದ ಜಿಡಿಪಿ ಹಿಡಿತಕ್ಕೆ ಸಿಗದಷ್ಟು ಕಡಿಮೆಯಾಗುತ್ತಿದೆ. ಮತ್ತೆ ಈಗಿರುವ ನೀತಿಗಳನ್ನೇ ಮುಂದುವರಿಸಿದರೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಎನ್​ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಡಾ.ಅರವಿಂದ್​ ಸುಬ್ರಮಣಿಯನ್​, ನಿಮ್ಮ ಈ ನೀತಿಗಳನ್ನೇ ಮುಂದುವರಿಸಿದರೆ ದೇಶದ ಜಿಡಿಪಿ ಶೇ.5ಕ್ಕೆ ಕುಸಿಯಲಿದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಹೀಗಾಗಿ ಅರ್ಥಶಾಸ್ತ್ರಜ್ಞರು ಹೇಳಿದಂತೆ ಆರ್ಥಿಕತೆ ‘ಅಸಮರ್ಥ ವ್ಯವಸ್ಥಾಪಕ’ ಎಂಬಂತಾಗಿದೆ ಎಂದು ವಿಶ್ಲೇಷಿಸಿದರು.

ಅಷ್ಟೇ ಅಲ್ಲದೆ, ದೇಶದ ಆರ್ಥಿಕತೆ ಬಗ್ಗೆ ಬರೀ ವಿತ್ತ ಸಚಿವರೇ ಮಾತನಾಡುತ್ತಿದ್ದಾರೆ. ಜಿಡಿಪಿ ಕುಸಿತದ ಕುರಿತು ಪ್ರಧಾನಿ ಮೋದಿ ಅವರು ಮಾತ್ರ ಎಲ್ಲಿಯೂ ಮಾತನಾಡುತ್ತಿಲ್ಲ. ಅದು ಏಕೆಂದು ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಕಾಶ್ಮೀರ ಕಣಿವೆ 75 ಲಕ್ಷ ಜನರಿಂದ ಇದೇ ಆಗಸ್ಟ್ 4ರಿಂದ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ. ಅಲ್ಲಿನ ಜನರು ಕತ್ತಲೆ ಜಗತ್ತಿನಿಂದ ಹೊರಬರಲು ಹೋರಾಟ ಅಗತ್ಯ ಎಂದರು. ಈಚೆಗೆ ಹೈದರಾಬಾದ್​ನಲ್ಲಿ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣವನ್ನು ನೆನೆಸಿಕೊಂಡು ಭಾವುಕರಾದರು.

Last Updated : Dec 5, 2019, 4:24 PM IST

ABOUT THE AUTHOR

...view details