ಕರ್ನಾಟಕ

karnataka

ETV Bharat / bharat

ಡ್ರ್ಯಾಗನ್​ಗೆ ಮತ್ತೊಂದು ಶಾಕ್:  ಹೊಸದಾಗಿ 47 ಚೀನಾ ಆ್ಯಪ್​ ಬ್ಯಾನ್​, ಪಬ್​ಜೀ ಮೇಲೂ ನಿಗಾ! - ಕೇಂದ್ರ ಸರ್ಕಾರ

ಚೀನಾ ವಿರುದ್ಧ ಮತ್ತೊಂದು ಹಂತದ ಸಮರ ಸಾರಿರುವ ಕೇಂದ್ರ ಸರ್ಕಾರ ಹೊಸದಾಗಿ 47 ಆ್ಯಪ್​ಗಳ ಬ್ಯಾನ್​ ಮಾಡಿ ಆದೇಶಿಸಿದೆ. ಮತ್ತಷ್ಟು ಅಪ್ಲಿಕೇಶನ್​ಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ತಿಳಿಸಿದೆ.

Govt bans 47 Chinese apps
Govt bans 47 Chinese apps

By

Published : Jul 27, 2020, 2:52 PM IST

Updated : Jul 27, 2020, 3:30 PM IST

ನವದೆಹಲಿ: ಗಡಿಯಲ್ಲಿ ಭಾರತದೊಂದಿಗೆ ಕಾಲು ಕೆದರಿಕೊಂಡು ಜಗಳಕ್ಕೆ ಬರುತ್ತಿರುವ ಚೀನಾ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದ್ದು, ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಕಳೆದ ಕೆಲ ದಿನಗಳ ಹಿಂದೆ ಟಿಕ್​ಟಾಕ್​​ ಸೇರಿದಂತೆ 59 ಚೀನಾ ಆ್ಯಪ್​​ ಬ್ಯಾನ್​ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಮ್ಮೆ ಅಂತಹದ್ದೇ ಮತ್ತೊಂದು ನಿರ್ಧಾರಕ್ಕೆ ಕೈಹಾಕಿದೆ. ಡ್ರ್ಯಾಗನ್​ ರಾಷ್ಟ್ರದ 47 ಆಪ್ಲಿಕೇಶನ್​ಗಳ ಮೇಲೆ ನಿಷೇಧ ಹೇರಿ ಹೊಸದಾಗಿ ಆದೇಶ ಹೊರ ಹಾಕಿದೆ.

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್​ ಪ್ರಸಾದ್​ ಮಾಹಿತಿ ನೀಡಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ಪ್ರಮುಖವಾಗಿ ಇದೀಗ ಬ್ಯಾನ್​​ ಆಗಿರುವ ಆ್ಯಪ್​ಗಳಲ್ಲಿ ಟಿಕ್​ಟಾಕ್​ ಲೈಟ್​, ಹೆಲೋ ಲೈಟ್​, ಶೇರ್​ ಇಟ್​ ಲೈಟ್​, ಬಿಗೊ ಲೈವ್​ ಲೈಟ್ ಸೇರಿಕೊಂಡಿವೆ.

ಚೀನಾದ ಒಟ್ಟು 275 ಅಪ್ಲಿಕೇಶನ್​ಗಳ ಮೇಲೆ ನಿಗಾ ಇಡಲಾಗಿದ್ದು, ದೇಶದ ಭದ್ರತೆ, ಮಾಹಿತಿ ಸೋರಿಕೆ, ಗೌಪ್ಯತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಅವುಗಳ ಪರಿಶೀಲನೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಆ್ಯಪ್ ಬ್ಯಾನ್​ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಬ್​ಜಿ ಗೇಮ್​​ ಆ್ಯಪ್​ ಮೇಲು ನಿಗಾ ಇರಿಸಲಾಗಿದ್ದು, ನಿಷೇಧ ಮಾಡುವ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿದೆ ಎನ್ನಲಾಗಿದೆ.

Last Updated : Jul 27, 2020, 3:30 PM IST

ABOUT THE AUTHOR

...view details