ಕೊರೊನಾ ನಿಂಯತ್ರಣಕ್ಕೆ ರಾಜ್ಯವೇ ಲಾಕ್‌ಡೌನ್ ಆಗಿದ್ದು, ಇದರಿಂದ ಬಡವರಿಗೆ ಉಂಟಾದ ಸಮಸ್ಯೆಯನ್ನು ನಿವಾರಿಸಲು ತುಂಬಾ ಅಗತ್ಯವಿದ್ದ ಪರಿಹಾರದ ಪ್ಯಾಕೇಜ್ ಘೋಷಿಸಿದೆ. 1.7 ಲಕ್ಷ ಕೋಟಿ ವೆಚ್ಚದ ಈ ವಿತ್ತ ಪ್ಯಾಕೇಜ್ ಆದಾಯದಲ್ಲಿ ಖೋತಾ ಆದವರಿಗೆ ಬೆಂಬಲವಾಗಲಿದೆ. ಇದನ್ನು ಬಡವರಿಗೆ ನೇರವಾಗಿ ಒಂದು ತ್ರೈಮಾಸಿಕಕ್ಕೆ ಅಂದರೆ ಏಪ್ರಿಲ್‌ನಿಂದ ಜೂನ್‌ವರೆಗೆ ವಿತರಿಸಲಾಗುತ್ತದೆ.
ವಿವಿಧ ಉಪಕ್ರಮಗಳನ್ನು ಪಿಎಂ ಗರೀಬ್ ಕಲ್ಯಾಣ್ ಸ್ಕೀಮ್ ಎಂದು ಪ್ಯಾಕೇಜ್ ಮಾಡಲಾಗಿದೆ. ಬಡತನ ರೇಖೆ ಕೆಳಗೆ ವಾಸಿಸುತ್ತಿರುವ ಅಸಂಘಟಿತ ಕಾರ್ಮಿಕರು, ನಿರ್ಮಾಣ ಕೆಲಸಗಾರರು, ವಿಧವೆಯರು, ಹಿರಿಯ ನಾಗರಿಕರು ಇತರಿಗೆ ಈ ನೆರವನ್ನು ಒದಗಿಸಲಾಗುತ್ತಿದೆ. ನೇರ ನಗದು ವರ್ಗಾವಣೆ ಮೂಲಕ ಆದಾಯವನ್ನು ಒದಗಿಸುವ ಉದ್ದೇಶ ಇದಾಗಿದೆ. ಇದರ ಜೊತೆಗೆ ಪಡಿತರ ವ್ಯವಸ್ಥೆಯ ಮೂಲಕ ಆಹಾರ ಧಾನ್ಯಗಳನ್ನೂ ವಿತರಿಸಲಾಗುತ್ತದೆ.
ಸರ್ಕಾರ ಸ್ವಲ್ಪ ದಿನಗಳ ನಂತರ ಇನ್ನೊಂದು ಹಂತಕ್ಕೆ ಇದನ್ನು ಕೊಂಡೊಯ್ಯಬೇಕಿದೆ. ಲಾಕ್‌ಡೌನ್ ಅವಧಿ ಮುಂದುವರಿದರೆ ಆಗ ಅಪಾರವಾದ ಅನಿಶ್ಚಿತತೆ ತಾಂಡವವಾಡುತ್ತದೆ. ಕೆಲವು ಲಾಕ್‌ಡೌನ್ ನಿರ್ಧಾರಗಳು ಗಂಭೀರವಾಗಿ ಬಾಧಿಸಲಿವೆ. ಪಿಂಚಣಿ ಹಿಂಪಡೆಯುವುದಕ್ಕೆ ಹಾಗೂ ರಾಜ್ಯಗಳಿಗೂ ಇದರಿಂದ ಹೊರೆಯಾಗಲಿದೆ. ವಿತರಣೆಯ ವೆಚ್ಚ ಮತ್ತು ಪ್ರಮಾಣ ಕೂಡ ಸರ್ಕಾರದ ಹಣಕಾಸಿನ ಕೊರತೆಗೆ ಕಾರಣವಾಗಲಿದೆ.
ಸರ್ಕಾರ ಏನನ್ನು ಕೈಬಿಟ್ಟಿದೆ:
ಪರಿಹಾರ ಪ್ಯಾಕೇಜ್‌ನಲ್ಲಿ ವಹಿವಾಟು ಅಥವಾ ಉತ್ಪಾದಕ ವಲಯಕ್ಕೆ ಯಾವುದೇ ಕೊಡುಗೆ ಇಲ್ಲ. ಕೆಲವು ಉದ್ಯಮಗಳಂತೂ ಈ ಸಮಯದಲ್ಲಿ ಸರ್ಕಾರದ ಬೆಂಬಲವನ್ನು ನಿರೀಕ್ಷಿಸುತ್ತಿವೆ. ಎಂಎಸ್‌ಎಂಇಗಳು ತಮ್ಮ ನಿತ್ಯದ ವಹಿವಾಟಿನಲ್ಲಿ ಸಣ್ಣ ಮಾರ್ಜಿನ್ ಅನ್ನು ಅವಲಂಬಿರಿಸುತ್ತವೆ. ವಿಮಾನಯಾನ ಕಂಪನಿಗಳು, ಪ್ರವಾಸೋದ್ಯಮ, ಆತಿಥ್ಯ ಸೇವೆಗಳಾವುದಕ್ಕೂ ಸರ್ಕಾರ ಪರಿಹಾರ ನೀಡಿಲ್ಲ. ಈ ಎಲ್ಲಾ ಉದ್ಯಮಗಳೂ ಈ ಲಾಕ್‌ಡೌನ್ ಸಮಯದಲ್ಲಿ ಭಾರಿ ಸಂಕಷ್ಟಕ್ಕೆ ಸಿಲುಕಿವೆ. ಸೀಮಿತ ಮತ್ತು ಕೇಂದ್ರೀಕೃತ ಪ್ಯಾಕೇಜ್ ಘೋಷಣೆ ಮಾಡಿದ್ದು, ನಂತರದ ಹಂತದಲ್ಲಿ ಈ ವಲಯಕ್ಕೆ ಪ್ರತ್ಯೇಕ ಪರಿಹಾರವನ್ನು ಘೋಷಿಸುವ ನಿರೀಕ್ಷೆ ಮೂಡಿದೆ. ಆದರೆ ಈ ಬಗ್ಗೆ ಸದ್ಯದ ಮಟ್ಟಿಗೆ ಯಾವುದೇ ಮಾರ್ಗಸೂಚಿ ಅಥವಾ ಸ್ಪಷ್ಟತೆ ಇಲ್ಲ.