ಮುಂಬೈ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಸ್ತಾಪಿಸಿದಂತೆ ಖಾತೆ ಹಂಚಿಕೆಗೆ ಮಹಾರಾಷ್ಟ್ರ ರಾಜ್ಯಪಾಲ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅನುಮೋದನೆ ನೀಡಿದ್ದಾರೆ ಎಂದು ರಾಜ ಭವನ ವಕ್ತಾರರು ತಿಳಿಸಿದ್ದಾರೆ.
ಸಚಿವರಿಗೆ ಹಂಚಿಕೆ ಮಾಡಬೇಕಾದ ಖಾತೆಗಳ ಪಟ್ಟಿಯನ್ನು ಶನಿವಾರ ಸಂಜೆ ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ರಾಜ್ಯ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಈ ಹಿಂದೆ ತಿಳಿಸಿದ್ದರು. ಖಾತೆಗಳ ಹಂಚಿಕೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ ಎಂದು ರಾಜ ಭವನ ವಕ್ತಾರರು ಹೇಳಿದ್ದಾರೆ.
ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದರೂ ಖಾತೆ ಹಂಚಿಕೆಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಆದರೆ ಅಂತಿಮವಾಗಿ ಖಾತೆ ಹಂಚಿಕೆಗೆ ತೆರೆ ಬಿದ್ದಿದೆ.
ಪ್ರಮುಖವಾಗಿ ಹಣಕಾಸು ಮತ್ತು ಯೋಜನಾ ಖಾತೆ ಡಿಸಿಎಂ ಅಜಿತ್ ಪವಾರ್, ಸುಭಾಷ್ ದೇಸಾಯಿ ಅವರಿಗೆ ಕೈಗಾರಿಕೆ ಮತ್ತು ಗಣಿಗಾರಿಕೆ ಹಾಗೂ ಮರಾಠಿ ಭಾಷೆ ಖಾತೆ, ಅನಿಲ್ ದೇಶಮುಖ್ ಅವರಿಗೆ ಗೃಹ, ಏಕಾತ್ ಶಿಂಧೆ ಅರಿಗೆ ಗ್ರಾಮೀಣಾಭೀವೃದ್ಧಿ, ಆಧಿತ್ಯ ಠಾಕ್ರೆಗೆ ಪರಿಸರ ಮತ್ತು ಪ್ರವಾಸ ಖಾತೆ ನೀಡಲಾಗಿದೆ.
ಈ ಮೊದಲು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಇಬ್ಬರು ನವೆಂಬರ್ 28 ರಂದು ಪ್ರಮಾಣವಚನ ಸ್ವೀಕರಿಸಿದರು. ನಂತರ 36 ಮಂತ್ರಿಗಳನ್ನು ಸೇರಿಸುವ ಮೂಲಕ ಡಿಸೆಂಬರ್ 30 ರಂದು ಸಂಪುಟವನ್ನ ವಿಸ್ತರಣೆ ಮಾಡಲಾಗಿತ್ತು.