ನವದೆಹಲಿ: ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ನ ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಅನುಮತಿ ನೀಡಲಾಗಿದೆ. ಇದೀಗ ಕೋವಿಶೀಲ್ಡ್ ದರದ ಕುರಿತು ಸೆರಮ್ ಇನ್ಸ್ಟಿಟ್ಯೂಟ್ನ ಸಿಇಒ ಆದಾರ್ ಪೂನಾವಾಲ್ ಅವರು ಸ್ಪಷ್ಟನೆ ನೀಡಿದ್ದಾರೆ.
ಕೋವಿಶೀಲ್ಡ್ ದರದ ಕುರಿತು ಮಾಹಿತಿ ನೀಡಿರುವ ಪೂನವಾಲ ಅವರು, ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಮೊದಲ 100 ಮಿಲಿಯನ್ ಡೋಸ್ ಅನ್ನು ಭಾರತ ಸರ್ಕಾರಕ್ಕೆ ನೀಡಲಾಗುವುದು. ಯುಕೆ ಸರ್ಕಾರವೂ ಸಹ ಲಸಿಕೆ ಬಳಕೆಗೆ ಅನುಮೋದನೆ ನೀಡಿದೆ. ಒಂದು ಡೋಸ್ಗೆ 200 ರೂ. ನಂತೆ ಭಾರತ ಸರ್ಕಾರಕ್ಕೆ ಮಾರಾಟ ಮಾಡಲಾಗುವುದು. ಒಂದು ವೇಳೆ ಖಾಸಗಿ ಮಾರುಕಟ್ಟೆ ಅನುಮತಿ ಪಡೆದರೆ ಅದನ್ನು ಒಂದು ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಈಗಾಗಲೇ 50 ಮಿಲಿಯನ್ ಡೋಸ್ ಲಸಿಕೆ ಸಿದ್ಧವಾಗಿದೆ ಎಂದರು.