ಕರ್ನಾಟಕ

karnataka

By

Published : Apr 10, 2020, 7:01 PM IST

Updated : Apr 10, 2020, 7:19 PM IST

ETV Bharat / bharat

ಕೋವಿಡ್​-19 ಹೋರಾಟ; ತರಬೇತಿ ಕೋರ್ಸ್​ ಆರಂಭಿಸಿದ ಸರ್ಕಾರ

ಒಂದೊಮ್ಮೆ ಕೊರೊನಾ ವೈರಸ್​ ಸ್ಥಿತಿ ಸ್ಫೋಟಗೊಂಡಲ್ಲಿ ಹೆಚ್ಚಿನ ಆರೋಗ್ಯ ಸಿಬ್ಬಂದಿಯ ಸೇವೆ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಕೋವಿಡ್​-19 ಹೋರಾಟಕ್ಕಾಗಿ ಹೊಸ ತರಬೇತಿ ಕೋರ್ಸ್​ಗಳನ್ನು ಸರ್ಕಾರ ಆರಂಭಿಸಿದೆ.

training module for management of COVID-19
training module for management of COVID-19

ನವದೆಹಲಿ: ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ದಿಕ್ಷಾ (DIKSHA) ಪ್ಲಾಟ್​ಫಾರ್ಮ್​ನಲ್ಲಿ ಇಂಟಿಗ್ರೇಟೆಡ್ ಗವರ್ನಮೆಂಟ್​ ಆನ್ಲೈನ್​ ಟ್ರೇನಿಂಗ್​ (iGOT) ಎಂಬ ಪೋರ್ಟಲ್ ಮೂಲಕ ಕೋವಿಡ್​-19 ಹೋರಾಟಕ್ಕಾಗಿ ಹೊಸ ತರಬೇತಿ ಕೋರ್ಸ್​ಗಳನ್ನು ಸರ್ಕಾರ ಆರಂಭಿಸಿದೆ.

ದೇಶಾದ್ಯಂತ ಕೋವಿಡ್​ ಹೋರಾಟದಲ್ಲಿ ಆರೋಗ್ಯ ಸಿಬ್ಬಂದಿ ಮುಂಚೂಣಿಯಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಒಂದೊಮ್ಮೆ ಕೊರೊನಾ ವೈರಸ್​ ಸ್ಥಿತಿ ಸ್ಫೋಟಗೊಂಡಲ್ಲಿ ಹೆಚ್ಚಿನ ಆರೋಗ್ಯ ಸಿಬ್ಬಂದಿ ಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ದೂರದೃಷ್ಟಿಯ ಕ್ರಮವಾಗಿ ಈ ಕೋರ್ಸ್​ ಪ್ರಾರಂಭಿಸಲಾಗಿದೆ.

ವೈದ್ಯರು, ನರ್ಸ್, ಪ್ಯಾರಾಮೆಡಿಕಲ್ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು, ಟೆಕ್ನಿಶಿಯನ್ಸ್, ಎಎನ್​ಎಂ, ರಾಜ್ಯ ಸರ್ಕಾರಿ ಅಧಿಕಾರಿಗಳು, ನಾಗರಿಕ ರಕ್ಷಣಾ ಅಧಿಕಾರಿಗಳು, ವಿವಿಧ ಪೊಲೀಸ್ ವಿಭಾಗಗಳು, ಎನ್​ಸಿಸಿ, ನೆಹರು ಯುವ ಕೇಂದ್ರ ಸಂಘಟನೆ, ಎನ್ನೆಸ್ಸೆಸ್, ಇಂಡಿಯನ್​ ರೆಡ್ ಕ್ರಾಸ್, ಸ್ಕೌಟ್ಸ್​ ಮತ್ತು ಗೈಡ್ಸ್​ಗಳಿಗಾಗಿ ಐಜಿಓಟಿ ಕೋರ್ಸ್​ಗಳನ್ನು ವಿಶೇಷವಾಗಿ ತಯಾರಿಸಲಾಗಿದೆ.

https://igot.gov.in/igot/ ಮೂಲಕ ಐಜಿಓಟಿ ಪೋರ್ಟಲ್​ಗೆ ಭೇಟಿ ನೀಡಿ ಕೋರ್ಸ್​ಗೆ ನೋಂದಾಯಿಸಬಹುದು ಹಾಗೂ ತಮ್ಮ ಬಿಡುವಿನ ವೇಳೆಯಲ್ಲಿ ಪಾಠಗಳನ್ನು ಕಲಿಯಬಹುದು.

Last Updated : Apr 10, 2020, 7:19 PM IST

ABOUT THE AUTHOR

...view details