ಕರ್ನಾಟಕ

karnataka

ETV Bharat / bharat

ನಮ್ಮಲ್ಲೂ ದೋಷಗಳಿದ್ದವು.. ಎಲ್ಲದಕ್ಕೂ ನಾವು ಕಾರಣವಲ್ಲ: ಡಾ. ಸಿಂಗ್ ತಿರುಗೇಟು - ಪಂಜಾಬ್ ಮಹಾರಾಷ್ಟ್ರ ನ್ಯಾಷನಲ್​ ಬ್ಯಾಂಕ್

ನಾನು ಅಧಿಕಾರದಲ್ಲಿದ್ದಾಗ ಕೆಲವು ದೌರ್ಬಲ್ಯಗಳು ಇದ್ದವು. ಆದರೆ, ಪ್ರತಿಯೊಂದಕ್ಕೂ ಯುಪಿಎ ಸರ್ಕಾರ ಕಾರಣ ಎಂದು ನೀವು ಹೇಳಲು ಸಾಧ್ಯವಾಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್​ ಆರೋಪಕ್ಕೆ ಮಾಜಿ ಪ್ರಧಾನಿ ತಿರುಗೇಟು ನೀಡಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್

By

Published : Oct 17, 2019, 4:55 PM IST

ನವದೆಹಲಿ: ಮನಮೋಹನ್ ​ಸಿಂಗ್ ಕಾಲದಲ್ಲಿ ಬ್ಯಾಂಕಿಂಗ್​ ವಲಯ ಅತಿ ಕೆಟ್ಟ ದಿನಗಳನ್ನ ಎದುರಿಸಿತ್ತು ಎಂದು ಆರೋಪಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಆರೋಪಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪರಿಹಾರಗಳನ್ನು ಕಂಡುಕೊಳ್ಳುವ ಬದಲು ವಿರೋಧ ಪಕ್ಷದ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುವ ಗೀಳು ಹೊಂದಿದೆ ಎಂದಿದ್ದಾರೆ. ಇದೇ ವೇಳೆ, ಪಂಜಾಬ್ ಮಹಾರಾಷ್ಟ್ರ ನ್ಯಾಷನಲ್​ ಬ್ಯಾಂಕ್(PMC) ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇರುವಾಗಲೇ ಈ ಬ್ಯಾಂಕ್​ ಪರಿಸ್ಥಿತಿ ಹೀಗಾಗಿದೆ. 16 ಲಕ್ಷ ಜನರು ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಿಜೆಪಿ ಸರ್ಕಾರ ಜನ ಸ್ನೇಹಿ ನೀತಿಗಳನ್ನ ಅಳವಡಿಸಿಕೊಳ್ಳುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಿರ್ಮಲಾ ಸೀತಾರಾಮನ್​ ಅವರ ಹೇಳಿಕೆಯನ್ನ ಗಮನಿಸಿದ್ದೇನೆ ಅದಕ್ಕೆ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ. ಆದರೆ, ಒಬ್ಬರು ಆರ್ಥಿಕತೆಯನ್ನು ಸರಿಪಡಿಸುವ ಮೊದಲು, ಅದರ ಕಾಯಿಲೆಗಳು ಮತ್ತು ಅವುಗಳ ಕಾರಣಗಳ ಬಗ್ಗೆ ತಿಳಿದುಕೊಳ್ಳಬೇಕು. ಅದರ ಬದಲು ಎದುರಾಳಿಗಳ ಮೇಲೆ ಆರೋಪ ಮಾಡಲು ಹೋದರೆ, ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ನಾನು ಅಧಿಕಾರದಲ್ಲಿದ್ದಾಗ ಕೆಲವು ದೌರ್ಬಲ್ಯಗಳು ಇದ್ದವು. ಆದರೆ, ಪ್ರತಿಯೊಂದಕ್ಕೂ ಯುಪಿಎ ಸರ್ಕಾರ ಕಾರಣ ಎಂದು ನೀವು ಹೇಳಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ABOUT THE AUTHOR

...view details