ನವದೆಹಲಿ: ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಪಾಸ್ಪೋರ್ಟ ಅನ್ನು ಭಾರತ ಸರ್ಕಾರ ರದ್ದುಗೊಳಿಸಿದೆ.
ನಿತ್ಯಾನಂದನ ಪಾಸ್ಪೋರ್ಟ್ ರದ್ದು! ಹೊಸ ಅರ್ಜಿ ತಿರಸ್ಕರಿಸಿದ ವಿದೇಶಾಂಗ ಇಲಾಖೆ!
ವಿದೇಶದಲ್ಲಿ ತನ್ನದೇ ಕೈಲಾಸ ಎಂಬ ಹೆಸರಿನ ರಾಷ್ಟ್ರಕಟ್ಟಲು ಮುಂದಾಗಿದ್ದಾನೆ ಎನ್ನಾಲಾದ ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಪಾಸ್ಪೋರ್ಟನ್ನು ಭಾರತ ಸರ್ಕಾರ ರದ್ದುಗೊಳಿಸಿದೆ. ಅಲ್ಲದೆ ಆತ ಹೊಸ ಪಾಸ್ಪೋರ್ಟ್ಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಕೂಡಾ ತಿರಸ್ಕರಿಸಲಾಗಿದೆ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾ ರವೀಶ್ ಕುಮಾರ್ ತಿಳಿಸಿದ್ದಾರೆ.
ಬಿಡದಿಯಿಂದ ವಿದೇಶಕ್ಕೆ ಪರಾರಿಯಾಗಿ, ಈಕ್ವೆಡಾರ್ನಲ್ಲಿ ಕೈಲಾಸ ಎಂಬ ಹೆಸರಿನ ರಾಷ್ಟ್ರ ಕಟ್ಟಲು ನಿತ್ಯಾನಂದ ಮುಂದಾಗಿದ್ದಾನೆ ಎನ್ನಲಾಗಿತ್ತು. ಪಾಸ್ಪೋರ್ಟ್ ಇಲ್ಲದೆ ನಿತ್ಯಾನಂದ ಹೇಗೆ ವಿದಾಶಕ್ಕೆ ಹಾರಿದ ಎಂಬ ಪ್ರಶ್ನೆಯೂ ಎದ್ದಿತ್ತು. ಸದ್ಯ ಭಾರತದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ನಿತ್ಯಾನಂದನ ಪಾಸ್ಪೋರ್ಟ್ ರದ್ದುಗೊಳಿಸಿರುವ ವಿಚಾರವನ್ನು ತಿಳಿಸಿದ್ದು, ಆತ ಹೊಸ ಪಾಸ್ಪೋರ್ಟ್ಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಕೂಡಾ ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿದೇಶದಲ್ಲಿ ಹೊಸ ರಾಷ್ಟ್ರ ಕಟ್ಟಲು ನಿತ್ಯಾನಂದ ಮುಂದಾಗಿದ್ದಾನೆ ಎಂಬ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿದ ರವೀಶ್, ಒಂದು ವೆಬ್ಸೈಟ್ ನಿರ್ಮಿಸುವುದಕ್ಕಿಂತ ರಾಷ್ಟವನ್ನು ಕಟ್ಟುವುದು ವಿಭಿನ್ನವಾಗಿದೆ ಎಂದಿದ್ದಾರೆ.