ಕರ್ನಾಟಕ

karnataka

ETV Bharat / bharat

ಸರ್ಕಾರದ ಮುಂಗಾಡ ಅಂದಾಜು... 2019-20ರ ಜಿಡಿಪಿ ಶೇ 5ಕ್ಕೆ ಕುಸಿತ - government estimates 5 percent gdp,

2008ರ ಬಳಿಕ ಇದು ಅತ್ಯಂತ ಕನಿಷ್ಠ ಜಿಡಿಪಿ ಅಭಿವೃದ್ಧಿ ದರವಾಗಿರಲಿದೆ. 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಕಂಡುಬಂದ ಹಿನ್ನೆಲೆಯಲ್ಲಿ  ಶೇ 3.1ರಷ್ಟು ಮಾತ್ರವೇ ಜಿಡಿಪಿ ಹೆಚ್ಚಳವಾಗಿತ್ತು. ಪ್ರಸಕ್ತ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ನಡುವಿನ ತ್ರೈಮಾಸಿಕದಲ್ಲಿ ಸಹ ಜಿಡಿಪಿ ಕೇವಲ ಶೇ 4.5ರಷ್ಟು ಬೆಳವಣಿಗೆ ಹೊಂದಿತ್ತು. ಈಗ 2019-20ರ ವಿತ್ತೀಯ ವರ್ಷದಲ್ಲಿ ಶೇ 5ರಷ್ಟು ಪ್ರಗತಿ ದಾಖಲಿಸಿದೆ.

government estimates, government estimates 5 percent gdp,government estimates 5 percent gdp growth, government estimates 5 percent gdp growth in 2019-20, ಸರ್ಕಾರದ ಅಂದಾಜು, ಶೇಕಡ 5ರಷ್ಟು ಜಿಡಿಪಿ ಸರ್ಕಾರದ ಅಂದಾಜು, ಶೇಕಡ 5ರಷ್ಟು ಜಿಡಿಪಿ ಬೆಳವಣಿಕೆ ಸರ್ಕಾರದ ಅಂದಾಜು, 2019-20ರಲ್ಲಿ ಶೇಕಡ 5ರಷ್ಟು ಜಿಡಿಪಿ ಸರ್ಕಾರದ ಅಂದಾಜು,
ಸಂಗ್ರಹ ಚಿತ್ರ

By

Published : Jan 8, 2020, 1:07 AM IST

Updated : Jan 8, 2020, 5:16 PM IST

ನವದೆಹಲಿ: ದೇಶದ ಆರ್ಥಿಕತೆಯು 2019-20ರ ವಿತ್ತೀಯ ವರ್ಷದಲ್ಲಿ ಶೇ 5ರಷ್ಟು ಪ್ರಗತಿ ದಾಖಲಿಸಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್​​ಎಸ್​ಒ) ಅಂದಾಜಿಸಿದೆ.

2008ರ ಬಳಿಕ ಇದು ಅತ್ಯಂತ ಕನಿಷ್ಠ ಜಿಡಿಪಿ ಅಭಿವೃದ್ಧಿ ದರವಾಗಿರಲಿದೆ. 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಕಂಡುಬಂದ ಹಿನ್ನೆಲೆಯಲ್ಲಿ ಶೇ 3.1ರಷ್ಟು ಮಾತ್ರವೇ ಜಿಡಿಪಿ ಹೆಚ್ಚಳವಾಗಿತ್ತು. ಪ್ರಸಕ್ತ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ನಡುವಿನ ತ್ರೈಮಾಸಿಕದಲ್ಲಿ ಸಹ ಜಿಡಿಪಿ ಕೇವಲ ಶೇ 4.5ರಷ್ಟು ಬೆಳವಣಿಗೆ ಹೊಂದಿತ್ತು.

ತಯಾರಿಕಾ ವಲಯದಲ್ಲಿನ ಬೆಳವಣಿಗೆಯು ಗಮನಾರ್ಹವಾಗಿ ಕಡಿಮೆಯಾಗಿರುವುದು ಇಳಿಕೆಗೆ ಮುಖ್ಯ ಕಾರಣವಾಗಿದೆ. ಕಳೆದ ವರ್ಷದಲ್ಲಿ ಶೇ 6.2ರಷ್ಟಿದ್ದ ಈ ವಲಯದ ಬೆಳವಣಿಗೆಯು ಈಗ ಶೇ 2ಕ್ಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ. ಕಟ್ಟಡ ನಿರ್ಮಾಣ, ವಿದ್ಯುತ್ ಉತ್ಪಾದನೆ, ಅನಿಲ ಮತ್ತು ನೀರು ಪೂರೈಕೆ ವಲಯಗಳಲ್ಲಿ ಪ್ರಗತಿ ಕುಂಠಿತಗೊಂಡಿದೆ. ಗಣಿಗಾರಿಕೆ, ಸಾರ್ವಜನಿಕ ಆಡಳಿತ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಅಲ್ಪಮಟ್ಟಿಗೆ ಸುಧಾರಣೆ ಕಂಡುಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಸಂಗ್ರಹ ಚಿತ್ರ

ಮೊದಲ ಎರಡು ತ್ರೈಮಾಸಿಕಗಳಲ್ಲಿನ ಆರ್ಥಿಕ ಬೆಳವಣಿಗೆ ದರ ಆಧರಿಸಿ ಈ ವಾರ್ಷಿಕ ದರದ ಮುಂಗಡ ಅಂದಾಜು ಮಾಡಲಾಗಿದೆ. ಮೊದಲ ತ್ರೈಮಾಸಿಕಗಳಲ್ಲಿ ವೃದ್ಧಿಯ ದರವು 6 ವರ್ಷಗಳ ಹಿಂದಿನ ಕನಿಷ್ಠ ಮಟ್ಟವಾದ ಶೇ 5 ಮತ್ತು ಶೇ 4.5ಕ್ಕೆ ಇಳಿಕೆಯಾಗಿದೆ. ಹಣಕಾಸು ವರ್ಷದ ಮೊದಲಾರ್ಧದಲ್ಲಿನ ವೃದ್ಧಿ ದರವು ಶೇ 4.8ರಷ್ಟಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಡಿಸೆಂಬರ್​ನಲ್ಲಿ ಪ್ರಕಟಿಸಿದ್ದ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ವೃದ್ಧಿ ದರವನ್ನು ಪರಿಷ್ಕರಿಸಿ ಶೇ 6.1ರಿಂದ ಶೇ 5ಕ್ಕೆ ಇಳಿಸಿತ್ತು.

2018-19ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 6.8ರಷ್ಟು ದಾಖಲಾಗಿತ್ತು. ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಬಜೆಟ್‌ ಮಂಡನೆಗೆ ಒಂದು ತಿಂಗಳ ಮುಂಚೆಯೇ ಮುಂಗಡ ಅಂದಾಜು ‍ಪ್ರಕಟಿಸಲಾಗುತ್ತಿದೆ.

ಹಣಕಾಸು ವರ್ಷದ ಮೊದಲ 7 ತಿಂಗಳಲ್ಲಿನ ಕೈಗಾರಿಕಾ ತಯಾರಿಕೆ ಸೂಚ್ಯಂಕ (ಐಐಪಿ), ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳ ಹಣಕಾಸು ಸಾಧನೆ, ಕೃಷಿ ಉತ್ಪಾದನೆ, ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಲೆಕ್ಕಪತ್ರ, ರೈಲ್ವೆ, ವಿಮಾನ ಮತ್ತು ಬಂದರಗಳಲ್ಲಿನ ಸರಕು ನಿರ್ವಹಣೆ ಮತ್ತು ಪ್ರಯಾಣಿಕರ ಸಂಖ್ಯೆ, ವಾಣಿಜ್ಯ ವಾಹನಗಳ ಮಾರಾಟ ಮತ್ತಿತರ ಮಾಹಿತಿ ಆಧರಿಸಿ ಜಿಡಿಪಿಯ ಮುಂಗಡ ಅಂದಾಜು ಮಾಡಲಾಗುತ್ತದೆ.

Last Updated : Jan 8, 2020, 5:16 PM IST

ABOUT THE AUTHOR

...view details