ನವದೆಹಲಿ: ಖಾಸಗಿ ಉದ್ಯಮಿಗಳಿಗೆ ಹೆಚ್ಚಿನ ಸ್ಥಳಾವಕಾಶ ನೀಡಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.
"ಈ ಸರ್ಕಾರವು ಎರಡು ವಿಷಯಗಳಿಗೆ ಬದ್ಧವಾಗಿದೆ. ಒಂದು ಖಾಸಗಿ ಉದ್ಯಮಿಗಳಿಗೆ ಹೆಚ್ಚಿನ ಜಾಗವನ್ನು ನೀಡುವುದು. ಎರಡನೇಯದು ನಾವು ಸ್ವಾವಲಂಬನೆಯನ್ನು ಅನುಸರಿಸುತ್ತೇವೆ. ನಮ್ಮ ದೇಶೀಯ ಉದ್ಯಮಿಗಳ ಬೆಳವಣಿಗೆಗೆ ಉತ್ತಮ ವಾತಾವರಣವನ್ನು ನಾವು ನೀಡುತ್ತೇವೆ" ಎಂದು ತಿಳಿಸಿದ್ದಾರೆ.
ಹೂಡಿಕೆದಾರರನ್ನು ಉತ್ತೇಜಿಸಲು ನೀತಿ ಆಯೋಗ ಉತ್ಪಾದನೆಗೆ ಸಂಬಂಧಿಸಿದ ಪ್ರೋತ್ಸಾಹಕ ಯೋಜನೆಯನ್ನು ತಂದಿದೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
"ನಾವು ಎಫ್‌ಡಿಐಯನ್ನು ಆಕರ್ಷಿಸುವಾಗ ಈಗಾಗಲೇ ಭಾರತದಲ್ಲಿ ಹೂಡಿಕೆ ಮಾಡಿದವರಲ್ಲಿ ನಂಬಿಕೆಯನ್ನು ಪುನಃ ಸ್ಥಾಪಿಸುತ್ತೇವೆ. ಉತ್ತಮ ಮೂಲ ಸೌಕರ್ಯ ಮತ್ತು ಹೆಚ್ಚಿನ ನಮ್ಯತೆ ಮೂಲಕ ಅವರನ್ನು ಗುರುತಿಸಲು ಬಯಸುತ್ತೇವೆ. ಇದಕ್ಕಾಗಿ ನಾವು ಪ್ರೊಡಕ್ಷನ್ ಲಿಂಕ್ಡ್ ಪ್ರೋತ್ಸಾಹಕವನ್ನು ಹೊರ ತಂದಿದ್ದೇವೆ" ಎಂದು ಹೇಳಿದ್ದಾರೆ.