ಕರ್ನಾಟಕ

karnataka

ETV Bharat / bharat

ಗೃಹ ಸಚಿವರಿಗೆ ಶೂ ಎಸೆದಿದ್ದ ಈತ ಇದೀಗ ಆಪ್​ನ ಅಭ್ಯರ್ಥಿ!!! - AAP convener Gopal Italia

ಗುಜರಾತ್​ನ ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಆಪ್ ಎಲ್ಲ ಸ್ಥಾನಗಳಲ್ಲೂ ಸ್ಪರ್ಧಿಸಲಿದೆ. ಕೇಜ್ರಿವಾಲ್ ನೇತೃತ್ವದ ಪಕ್ಷವು ವಿವಿಧ ಜಿಲ್ಲೆಗಳು ಹಾಗೂ ಪುರಸಭೆಯ ಅಧ್ಯಕ್ಷರ ಹೆಸರನ್ನೂ ಪ್ರಕಟಿಸಿದೆ.

aap
ಆಪ್

By

Published : Dec 12, 2020, 9:10 PM IST

ಗಾಂಧಿನಗರ( ಗುಜರಾತ್)‌: ಮುಂದಿನ ವರ್ಷದ ಆರಂಭದಲ್ಲಿ ಗುಜರಾತ್‌ನ ಸ್ಥಳೀಯ ಸಂಸ್ಥೆ ಚುನಾವಣೆಯ ಎಲ್ಲ ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಆಮ್ ಆದ್ಮಿ ಪಕ್ಷ (ಆಪ್) ತಿಳಿಸಿದೆ.

ರಾಜ್ಯ ಸರ್ಕಾರದಲ್ಲಿ 2017 ರಲ್ಲಿ ಗೃಹ ಸಚಿವರಾಗಿದ್ದ ಪ್ರದೀಪ್ಸಿಂಹ ಜಡೇಜಾ ಅವರ ಮೇಲೆ ಶೂ ಎಸೆದ ಗೋಪಾಲ್ ಇಟಾಲಿಯಾ ಅವರನ್ನು ಆಪ್​ ನೇಮಕ ಮಾಡಿದೆ. ಆಪ್​ ಗುಜರಾತ್‌ನಲ್ಲಿ ಬಲವಾದ ಪಕ್ಷವಾಗಿ ಹೊರಹೊಮ್ಮುತ್ತಿದ್ದು, ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಆಪ್ ಎಲ್ಲಾ ಸ್ಥಾನಗಳಲ್ಲೂ ಸ್ಪರ್ಧಿಸಲಿದೆ. ಆಪ್ ಗುಜರಾತ್ ರಾಜ್ಯ ಕನ್ವೀನರ್ ಆಗಿ ಯುವ ಮುಖಂಡ ಗೋಪಾಲ್ ಇಟಾಲಿಯಾ ಅವರನ್ನು ಘೋಷಿಸಲಾಗಿದೆ, ಎಂದು ಆಮ್​ ಆದ್ಮಿ ಪಾರ್ಟಿ ಗುಜರಾತ್ ಟ್ವೀಟ್ ಮಾಡಿದೆ.

ಇದನ್ನೂ ಓದಿ:ರೈತರನ್ನು ರಕ್ಷಿಸುವ ಸಲುವಾಗಿಯೇ ಕೃಷಿ ಕಾನೂನುಗಳ ಜಾರಿ: ಕೇಂದ್ರ ಕೃಷಿ ಸಚಿವ

ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ವಿವಿಧ ಜಿಲ್ಲೆಗಳು ಹಾಗೂ ಪುರಸಭೆಯ ಅಧ್ಯಕ್ಷರ ಹೆಸರನ್ನೂ ಪ್ರಕಟಿಸಿದೆ. ಇಟಾಲಿಯಾ ಅವರಿಗೆ ಅಹಮದಾಬಾದ್ ಕಲೆಕ್ಟರೇಟ್ ಅಡಿಯಲ್ಲಿರುವ ಧಂಧುಕಾ ತಾಲೂಕು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಡಿ ಬರುವ ರಾಜ್ಯ ಸರ್ಕಾರಿ ಗುಮಾಸ್ತರ ಕಚೇರಿಯಲ್ಲಿ ಸ್ಥಾನ ನೀಡಲಾಗಿದೆ.

ಅವರು ಮಾರ್ಚ್ 2, 2017 ರಂದು ಮಾಧ್ಯಮ ಉದ್ದೇಶಿಸಿ ಮಾತನಾಡಲು ಸಿದ್ದರಾಗುತ್ತಿದ್ದ ಜಡೇಜಾಗೆ ಅವರು ಶೂ ಎಸೆದಿದ್ದರು. ಆದರೆ, ಶೂ ಗುರಿ ಮುಟ್ಟಿರಲಿಲ್ಲ. ಹಾಗೂ ಪೊಲೀಸ್ ಕಾನ್‌ಸ್ಟೆಬಲ್‌ನಂತೆ ನಟಿಸಿ, ಸಾಮಾಜಿಕ ಮಾಧ್ಯಮದಲ್ಲಿ ಸಂಭಾಷಣೆಯ ಆಡಿಯೊ ತುಣುಕುಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಇಟಾಲಿಯಾವನ್ನು ಅಹಮದಾಬಾದ್ ಅಪರಾಧ ವಿಭಾಗ ಬಂಧಿಸಿತ್ತು. ಇದೀಗ ಅವರನ್ನೇ ಆಪ್​ ರಾಜ್ಯ ಕನ್ವೀನರ್ ಆಗಿ ನೇಮಕ ಮಾಡಿದೆ.

ABOUT THE AUTHOR

...view details