ನವದೆಹಲಿ:ರಾಷ್ಟ್ರರಾಜಧಾನಿಯ ಗೋವಿಂದಪುರಿ ಪೊಲೀಸ್ ಠಾಣಾ ವ್ಯಾಪ್ತಿಯ ತುಘಲಕಾಬಾದ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ತಾಯಿ-ಮಗನನ್ನು ಥಳಿಸಿರುವ ಘಟನೆ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕ್ಷುಲ್ಲಕ ಕಾರಣಕ್ಕೆ ತಾಯಿ-ಮಗನನ್ನು ಥಳಿಸಿದ ಜನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ತಾಯಿ-ಮಗನ ಮೇಲೆ ಹಲ್ಲೆ
ನವದೆಹಲಿಯ ತುಘಲಕಾಬಾದ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ತಾಯಿ-ಮಗನನ್ನು ಥಳಿಸಿರುವ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕ್ಷುಲ್ಲಕ ಕಾರಣಕ್ಕೆ ಅಮ್ಮಾ ಮಗನನ್ನು ಥಳಿಸಿದ ಜನ: ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆ
ಹಲ್ಲೆಗೀಡಾದ ಮಹಿಳೆ ಮತ್ತು ಆಕೆಯ ಮಗ ತುಘಲಕಾಬಾದ್‌ನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಮಹಿಳೆ ಓಡಾಡುವ ದಾರಿಯಲ್ಲಿ ಸರಕುಗಳನ್ನು ಇಟ್ಟಿದ್ದಳು ಎಂಬ ಕಾರಣಕ್ಕೆ ಸುತ್ತಮುತ್ತಲ ಮಹಿಳೆಯರು ಜಗಳ ತೆಗೆದಿದ್ದಾರೆ. ಜಗಳ ಅತಿರೇಕಕ್ಕೆ ತಿರುಗಿ ತಾಯಿ-ಮಗನನ್ನು ಮನಸೋಇಚ್ಛೆ ಥಳಿಸಿದ್ದಾರೆ ಎನ್ನಲಾಗಿದ್ದು, ಜನರು ಸುತ್ತುವರೆದು ಅದನ್ನು ವೀಕ್ಷಿಸುವ ದೃಶ್ಯ ಸೆರೆಯಾಗಿದೆ. ಸದ್ಯ ಗೋವಿಂದಪುರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಗೊಂಡಿದ್ದಾರೆ.