ಕರ್ನಾಟಕ

karnataka

By

Published : Jun 13, 2020, 1:16 PM IST

ETV Bharat / bharat

ಕೋವಿಡ್‌-19‌ ಟೆಸ್ಟ್‌ ಲ್ಯಾಬ್‌ಗಳ ಗೂಗಲ್‌ ಮಾಹಿತಿ:  ಹೊಸ ಫ್ಯೂಚರ್‌ ಬಿಡುಗಡೆ

ಕೋವಿಡ್‌-19ರ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡಿದರೆ ಬಳಕೆದಾರರ ಸಮೀಪದ ಟೆಸ್ಟ್‌ ಲ್ಯಾಬ್‌ಗಳ ಬಗ್ಗೆ ಮಾಹಿತಿ ನೀಡುವ ಹೊಸ ಫ್ಯೂಚರ್‌ ಅನ್ನು ಗೂಗಲ್‌ ಸಂಸ್ಥೆ ಬಿಡುಗಡೆ ಮಾಡಿದೆ.

google-to-show-covid-19-testing-centres-on-search-assistant-and-maps
ಕೋವಿಡ್‌-19‌ ಟೆಸ್ಟ್‌ ಲ್ಯಾಬ್‌ಗಳ ಗೂಗಲ್‌ ಮಾಹಿತಿ; ಹೊಸ ಫ್ಯೂಚರ್‌ ಬಿಡುಗಡೆ

ನವದೆಹಲಿ: ಸರ್ಚ್‌ ಇಂಜಿನ್‌ ದಿಗ್ಗಜ ಗೂಗಲ್‌ ಮತ್ತೊಂದು ಹೊಸ ಫ್ಯೂಚರ್ ಬಿಡುಗಡೆ ಮಾಡಿದೆ. ಕೊರೊನಾ ವ್ಯಾಪ್ತಿಯ ಬಗ್ಗೆ ಸರ್ಚ್‌, ಮ್ಯಾಪ್​​​​​​‌ನಲ್ಲಿ ಬಳಕೆದಾರರು ತಮ್ಮ ಸಮೀಪದ ಕೊರೊನಾ ಪರೀಕ್ಷಾ ಕೇಂದ್ರಗಳನ್ನು ತಿಳಿದುಕೊಳ್ಳಲು ಗೂಗಲ್‌ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐಸಿಎಂಆರ್‌) My gov ಫ್ಲಾಟ್‌ಫಾರ್ಮ್‌ನೊಂದಿಗೆ ಕೈಜೋಡಿಸಿ ಕೆಲಸ ಮಾಡುವುದಾಗಿ ಗೂಗಲ್‌ ಹೇಳಿದೆ.

ಫ್ಯೂಚರ್‌ನ ವಿಶೇಷತೆಗಳು

ಹೊಸ ಫ್ಯೂಚರ್ಸ್​​​​ನಲ್ಲಿ ಇಂಗ್ಲಿಷ್‌ ಸೇರಿದಂತೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಗುಜರಾತಿ, ಬೆಂಗಾಳಿ ಭಾಷೆಯಲ್ಲೂ ಸೇವೆ ನೀಡಲಿದೆ. ಯಾರಾದರೂ ಗೂಗಲ್‌ನಲ್ಲಿ ಕೊರೊನಾಗೆ ಸಂಬಂಧಿಸಿದ ವಿಷಯಗಳನ್ನು ಸರ್ಚ್‌ ಮಾಡಿದರೆ, ಇನ್ಮುಂದೆ ಸಮೀಪದಲ್ಲಿ ಟೆಸ್ಟಿಂಗ್‌ ಲ್ಯಾಬ್‌ ಮಾಹಿತಿ ಸಿಗಲಿದೆ.

ಪ್ರಸ್ತುತ 300 ಪಟ್ಟಣಗಳಲ್ಲಿನ 700 ಟೆಸ್ಟಿಂಗ್‌ ಲ್ಯಾಬ್‌ಗಳ ವಿವರಗಳನ್ನು ಗೂಗಲ್‌ನಲ್ಲಿ ಮಾಹಿತಿ ಸಿಗಲಿದೆ. ಶೀಘ್ರದಲ್ಲೇ ಉಳಿದ ಪಟ್ಟಣಗಳಿಗೆ ಈ ಸೇವೆಗಳನ್ನು ವಿಸ್ತರಿಸುವುದಾಗಿ ಗೂಗಲ್‌ ಸಂಸ್ಥೆ ತಿಳಿಸಿದೆ.

ABOUT THE AUTHOR

...view details