ನವದೆಹಲಿ:ದೇಶದ 400ರಷ್ಟು ರೈಲ್ವೆ ನಿಲ್ದಾಣಗಳಲ್ಲಿ ನೀಡುತ್ತಿದ್ದ ಉಚಿತ ವೈಫೈ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಗೂಗಲ್ ಸಂಸ್ಥೆ ಘೋಷಿಸಿದೆ. ಆದ್ರೆ ರೈಲ್ವೆ ಇಲಾಖೆಯ ಇತರೆ ಸೇವೆಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದೆ.
2015ರಲ್ಲಿ ಗೂಗಲ್ ಈ ಸೇವೆಯನ್ನು ಪ್ರಾರಂಭಿಸಿ, ಈ ಮೂಲಕ ದೇಶದ ಅತ್ಯಂತ ಜನಿಬಿಡ 400 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ನೀಡುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್ ಸಂಸ್ಥೆಯ ಪೇಮೆಂಟ್ ಮತ್ತು ನೆಕ್ಸ್ಟ್ ಬಿಲಿಯನ್ ಯೂಸರ್ಸ್ ವಿಭಾಗದ ಉಪಾಧ್ಯಕ್ಷ ಸೀಸರ್ ಸೆನ್‌ಗುಪ್ತಾ, "ನಾವು ಜೂನ್ 2018 ರ ಹೊತ್ತಿಗೆ ನಮ್ಮ ಗುರಿಯನ್ನು ದಾಟಿದ್ದೇವೆ. ಅಲ್ಲದೆ ದೂರಸಂಪರ್ಕ ಕಂಪನಿಗಳು, ಐಎಸ್ಪಿಗಳು ಮತ್ತು ಸ್ಥಳೀಯ ಅಧಿಕಾರಿಗಳ ಸಹಭಾಗಿತ್ವದಲ್ಲಿ ದೇಶದ ಇತರ ಸಾವಿರಾರು ನಿಲ್ದಾಣಗಳಲ್ಲಿ ಈ ಯೋಜನೆ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.