ನವದೆಹಲಿ :ಇಡೀ ವಿಶ್ವವನ್ನೇ ಬಾಧಿಸುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಗೂಗಲ್ ತನ್ನ ಡೂಡಲ್ ಮೂಲಕ ಗೌರವಪೂರ್ವಕ ಧನ್ಯವಾದ ಸಲ್ಲಿಸಿದೆ. ಆರ್ಥಿಕತೆ ಸೇರಿ ದೇಶದ ಅನೇಕ ಕ್ಷೇತ್ರಗಳು ಕೊರೊನಾ ಹೊಡೆತಕ್ಕೆ ತತ್ತರಿಸಿವೆ. ವಿಶ್ವದ ಬಹುತೇಕ ರಾಷ್ಟ್ರಗಳು ಕೊರೊನಾ ಬಿಕ್ಕಟ್ಟಿಗೆ ಸಿಲುಕಿವೆ. ಇಂತಹ ಸಮಯದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಕೊರೊನಾ ವಿರುದ್ಧ ಆರೋಗ್ಯ ಸಿಬ್ಬಂದಿ ಹೋರಾಡುತ್ತಿದ್ದು, ಅವರಿಗೆ ಗೂಗಲ್ ಧನ್ಯವಾದ ತಿಳಿಸಿದೆ.
ಕೊರೊನಾ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಗೂಗಲ್ ಡೂಡಲ್ ಗೌರವ.. ವೈದ್ಯರು, ನರ್ಸ್‌ಗಳಿಗೆ ಕೃತಜ್ಞತೆ!! - nurses & medical workers with doodle
ಆನಿಮೇಟೆಡ್ ಡೂಡಲ್‌ನಲ್ಲಿ ಹೃದಯದ ಎಮೋಜಿ ಇದ್ದು, ಅದರ ಮೂಲಕ ಎಲ್ಲ ಆರೋಗ್ಯ ಸಿಬ್ಬಂದಿಗೆ ಗೂಗಲ್ ಕೃತಜ್ಞತೆ ಸಲ್ಲಿಸಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವವರಿಗೆ ಗೌರವ ಸಲ್ಲಿಸಲು ಸರಣಿ ಡೂಡಲ್‌ಗಳನ್ನು ಗೂಗಲ್ ಮೀಸಲಿಟ್ಟಿದ್ದು, ಈ ಡೂಡಲ್ ಕೂಡ ಗೂಗಲ್‌ನ ಸರಣಿ ಡೂಡಲ್‌ನ ಒಂದು ಭಾಗವಾಗಿದೆ.
ಗೂಗಲ್ ಡೂಡಲ್ ಮೇಲೆ ಮೌಸ್ ಪಾಯಿಂಟ್ ಇಟ್ಟರೆ 'Thank you' ಎಂಬ ಮೆಸೇಜ್ ಕಾಣುತ್ತದೆ. ಅದರಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಥ್ಯಾಂಕ್ ಯೂ ಎಂಬ ಸಂದೇಶ ಕಾಣುತ್ತದೆ. ಆನಿಮೇಟೆಡ್ ಡೂಡಲ್‌ನಲ್ಲಿ ಹೃದಯದ ಎಮೋಜಿ ಇದ್ದು, ಅದರ ಮೂಲಕ ಎಲ್ಲ ಆರೋಗ್ಯ ಸಿಬ್ಬಂದಿಗೆ ಗೂಗಲ್ ಕೃತಜ್ಞತೆ ಸಲ್ಲಿಸಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವವರಿಗೆ ಗೌರವ ಸಲ್ಲಿಸಲು ಸರಣಿ ಡೂಡಲ್‌ಗಳನ್ನು ಗೂಗಲ್ ಮೀಸಲಿಟ್ಟಿದ್ದು, ಈ ಡೂಡಲ್ ಕೂಡ ಗೂಗಲ್‌ನ ಸರಣಿ ಡೂಡಲ್‌ನ ಒಂದು ಭಾಗವಾಗಿದೆ.
ಈ ಡೂಡಲ್ ಸರಣಿಯಲ್ಲಿ ವೈದ್ಯರು, ಶಿಕ್ಷಕರು, ವಿಜ್ಞಾನಿಗಳು, ಸಮಾಜ ಸೇವಕರು, ರೈತರು ಮತ್ತು ಮನೆ ಮನೆಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಡೆಲಿವರಿ ಬಾಯ್‌ಗಳಿಗೆ ಗೌರವ ಸಲ್ಲಿಸುವುದಾಗಿ ಗೂಗಲ್ ತಿಳಿಸಿದೆ.