ನಾಗಪಟ್ಟಣಂ (ತಮಿಳುನಾಡು): ಸಂಸಾರದಲ್ಲಿ ಒಡಕು ಮೂಡಿಸಿದೆ ಎಂದು ಆರೋಪಿಸಿದ ವ್ಯಕ್ತಿಯೊಬ್ಬ ಗೂಗಲ್ ಮ್ಯಾಪ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸಂಸಾರದಲ್ಲಿ ಒಡಕು ತಂದ ಆರೋಪದಡಿ ಗೂಗಲ್ ಮ್ಯಾಪ್ ವಿರುದ್ಧ ದೂರು - ಸಂಸಾರದಲ್ಲಿ ಒಡಕು ಮೂಡಿಸಿದ ಗೂಗಲ್ ಮ್ಯಾಪ್
ಗೂಗಲ್ ಮ್ಯಾಪ್ ತಮ್ಮ ಕುಟುಂಬದಲ್ಲಿ ಸಾಕಷ್ಟು ಅನುಮಾನ, ಗೊಂದಲಗಳಿಗೆ ಎಡಮಾಡಿಕೊಟ್ಟಿದೆ ಎಂದು ಗೂಗಲ್ ಮ್ಯಾಪ್ ವಿರುದ್ಧ ಆರೋಪಿಸಿದ ಆರ್.ಚಂದ್ರಶೇಖರನ್, ಗೂಗಲ್ ವಿರುದ್ಧ ದೂರು ದಾಖಲಿಸಿದ್ದಾರೆ.
![ಸಂಸಾರದಲ್ಲಿ ಒಡಕು ತಂದ ಆರೋಪದಡಿ ಗೂಗಲ್ ಮ್ಯಾಪ್ ವಿರುದ್ಧ ದೂರು](https://etvbharatimages.akamaized.net/etvbharat/prod-images/768-512-7305830-262-7305830-1590149193515.jpg)
ಮೇ 20ರಂದು ನಾಗಪಟ್ಟಣಂನ ಮಯಿಲಾಡುತುರೈ ನಿವಾಸಿ ಆರ್. ಚಂದ್ರಶೇಖರನ್ ಅವರ ಪತ್ನಿ, ಪತಿಯ ಮೊಬೈಲ್ ಪರಿಶೀಲಿಸುತ್ತಿದ್ದುರು. ಈ ವೇಳೆ ಪತಿ ಚಂದ್ರಶೇಖರನ್ ದಿನವಿಡಿ ಎಲ್ಲೆಲ್ಲಿ ಓಡಾಡಿದ್ದಾರೆ ಎಂಬುದನ್ನು ತಿಳಿಯಲು ಗೂಗಲ್ ಮ್ಯಾಪ್ ಅಪ್ಲಿಕೇಷನ್ ಅನ್ನು ಓಪನ್ ಮಾಡಿದ್ದಾರೆ. ಅಲ್ಲಿ 'ನಿಮ್ಮ ಟೈಮ್‌ಲೈನ್' ವಿಭಾಗವನ್ನು ತೆರೆದಾಗ ಹಲವು ಸ್ಥಳಗಳು ಬಂದಿವೆ. ಇದು ಗಂಡ-ಹೆಂಡತಿಯ ಜಗಳಕ್ಕೆ ಕಾರಣವಾಗಿದೆ.
ಗೂಗಲ್ ನಕ್ಷೆಯು ನಾನು ಭೇಟಿ ನೀಡದ ಸ್ಥಳಗಳನ್ನು ತೋರಿಸಿದೆ. ಇದು ಕುಟುಂಬದಲ್ಲಿ ಸಾಕಷ್ಟು ಅನುಮಾನ, ಗೊಂದಲಗಳಿಗೆ ಎಡಮಾಡಿಕೊಟ್ಟಿದೆ ಎಂದು ಆರ್.ಚಂದ್ರಶೇಖರನ್ ಗೂಗಲ್ ಮ್ಯಾಪ್ ವಿರುದ್ಧ ಆರೋಪಿಸಿದ್ದಾರೆ. ಅಲ್ಲದೇ, ಈ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ.