ಕರ್ನಾಟಕ

karnataka

ETV Bharat / bharat

ಹ್ಯಾಪಿ ಬರ್ತ್​ಡೇ ಗೂಗಲ್! ಸರ್ಚ್‌ ಎಂಜಿನ್‌ ದೈತ್ಯನ ಬಗ್ಗೆ ನಿಮಗಿಷ್ಟು ತಿಳಿದಿರಲಿ.. - ಗೂಗಲ್ ಸರ್ಚ್​ ಇಂಜಿನ್

1998ರಲ್ಲಿ ಇಬ್ಬರು ಪಿಹೆಚ್​ಡಿ ವಿದ್ಯಾರ್ಥಿಗಳಾದ ಸರ್ಗಿ ಬ್ರಿನ್ ಹಾಗೂ ಲ್ಯಾರಿ ಪೇಜ್ ಆರಂಭಿಸಿದ ಗೂಗಲ್ ಎನ್ನುವ ಸರ್ಚ್​ ಇಂಜಿನ್ ಸದ್ಯ ವಿಶ್ವದಲ್ಲೇ ಅತ್ಯಂತ ಹೆಚ್ಚು ಬಳಸಲ್ಪಟ್ಟ ವೆಬ್​ಸೈಟ್ ಎನ್ನುವ ಕೀರ್ತಿ ಪಡೆದಿದೆ.

ಹ್ಯಾಪಿ ಬರ್ತ್​ಡೇ ಗೂಗಲ್

By

Published : Sep 27, 2019, 10:01 AM IST

ನವದೆಹಲಿ:ಯಾವುದೇ ವಿಷಯ ಮಾಹಿತಿ ಬೇಕಿದ್ದರೂ ನಮಗೆ ಥಟ್ ಅಂತ ನೆನಪಾಗೋದು 'ಗೂಗಲ್'! ನಾವು, ನೀವು ಅಪೇಕ್ಷಿಸುವ ಯಾವುದೇ ಮಾಹಿತಿಯನ್ನಾದರೂ ನಿಮಿಷದೊಳಗಾಗಿ ನೀಡುವ ಗೂಗಲ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ.

1998ರ ಸೆಪ್ಟೆಂಬರ್ 27ರಂದು ಜನಿಸಿದ ಗೂಗಲ್ ನೋಡ ನೋಡ್ತಿದ್ದಂತೆ ಸರ್ಚ್​ ಇಂಜಿನ್ ದೈತ್ಯನಾಗಿ ಬೆಳೆದಿದೆ. ಇಂದು 21ನೇ ಬರ್ತ್​ಡೇ ಹಿನ್ನೆಲೆಯಲ್ಲಿ ವಿಶೇಷ ಡೂಡಲ್ ವಿನ್ಯಾಸ ಮಾಡಲಾಗಿದೆ.

ಗೂಗಲ್ ಹುಟ್ಟುಹಬ್ಬಕ್ಕೆ ವಿಶೇಷ ಡೂಡಲ್

ಗೂಗಲ್ ಹೆಸರು ಹುಟ್ಟಿದ್ದು ಹೀಗೆ..!

ಗೂಗುಲ್(googol) ಎನ್ನುವ ಹೆಸರಿನ ಮಾರ್ಪಾಡು ರೂಪವಿದು. ಒಂದು ಅಂಕಿಯ ಮುಂದೆ ನೂರು ಸೊನ್ನೆ ಬರೆದರೆ ಅದನ್ನು ಗೂಗುಲ್ ಎನ್ನುತ್ತಾರೆ. ಗೂಗಲ್​ನ ಮೊದಲ ಡೂಡಲ್ ರಚಿಸಿದ್ದು ಸಂಸ್ಥಾಪಕರಾದ ಸರ್ಗಿ ಬ್ರಿನ್ ಹಾಗೂ ಲ್ಯಾರಿ ಪೇಜ್ . 1998ರಲ್ಲಿ ಬರ್ನಿಂಗ್ ಮ್ಯಾನ್ ಫೆಸ್ಟಿವಲ್​ಗೆ ಮೊದಲ ಡೂಡಲ್ ಅರ್ಪಿಸಲಾಗಿತ್ತು.

ಪ್ರಸ್ತುತ ಅಮೆರಿಕಾದ ಕ್ಯಾಲಿಫೋರ್ನಿಯಾ ನಗರದ ಮೌಂಟೇನ್ ವ್ಯೂ ಪ್ರದೇಶದಲ್ಲಿ ಸಂಸ್ಥೆ ತನ್ನ ಕೇಂದ್ರ ಕಚೇರಿ ಹೊಂದಿದೆ. 50 ದೇಶಗಳಲ್ಲಿ ಒಟ್ಟಾರೆ 78 ಕಚೇರಿಗಳನ್ನು ಗೂಗಲ್ ಹೊಂದಿದ್ದು, ಭಾರತೀಯ ಮೂಲದವರೇ ಆಗಿರುವ ಸುಂದರ್ ಪಿಚೈ ಸದ್ಯ ಗೂಗಲ್ ಸಿಇಒ ಆಗಿದ್ದಾರೆ.

ABOUT THE AUTHOR

...view details