ಕರ್ನಾಟಕ

karnataka

ETV Bharat / bharat

ಹಳಿ ತಪ್ಪಿದ ಗೂಡ್ಸ್​ ರೈಲಿನ ಮೂರು ಬೋಗಿಗಳು, ರೈಲ್ವೆ ಸಂಚಾರದಲ್ಲಿ ಅಲ್ಪ ಬದಲಾವಣೆ - ಫಿರೋಜಾಬಾದ್​- ಶಿಕೋಹಾಬಾದ್​ ಮಾರ್ಗ

ಗೂಡ್ಸ್​​ ರೈಲಿನ ಮೂರು ಬೋಗಿಗಳು ಹಳಿತಪ್ಪಿ, ಉಳಿದ ರೈಲುಗಳ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾದ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​​ನಲ್ಲಿ ನಡೆದಿದೆ.

Goods train derails
ಹಳಿ ತಪ್ಪಿದ ರೈಲು

By

Published : Jun 14, 2020, 9:30 AM IST

ಫಿರೋಜಾಬಾದ್ ​(ಉತ್ತರಪ್ರದೇಶ): ಸರಕು ಸಾಗಣೆ ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ ಘಟನೆ ಫಿರೋಜಾಬಾದ್​ ಜಿಲ್ಲೆಯಲ್ಲಿ ನಡೆದಿದೆ.

ಶಿಕೋಹಾಬಾದ್​ ರೈಲ್ವೆ ನಿಲ್ದಾಣದ ಹೊರವಲಯದಲ್ಲಿ ಘಟನೆ ಸಂಭವಿಸಿತ್ತು. ಪರಿಣಾಮ, ಕಾನ್ಪುರ- ದೆಹಲಿ ಮಾರ್ಗವಾಗಿ ಸಂಚರಿಸುವ ಸುಮಾರು 12 ರೈಲುಗಳ ವೇಳಾಪಟ್ಟಿಯಲ್ಲಿ ಸ್ವಲ್ಪಮಟ್ಟಿನ ಬದಲಾವಣೆಯಾಗಿದೆ.

ಫಿರೋಜಾಬಾದ್​ನಿಂದ ಶಿಕೋಹಾಬಾದ್​ಗೆ ಬರುತ್ತಿದ್ದ ವೇಳೆ ನಡೆದ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಳಿತಪ್ಪಿದ ಬೋಗಿಗಳನ್ನು ತೆರವು ಮಾಡಲಾಗಿದೆ ಎಂದು ಉತ್ತರ-ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಜಿತ್​ ಕುಮಾರ್ ಸಿಂಗ್​ ಸ್ಪಷ್ಟನೆ ನೀಡಿದ್ದಾರೆ.

ಸದ್ಯಕ್ಕೆ ಜೋಧಪುರ- ಹೌರಾ ಎಕ್ಸ್​​ಪ್ರೆಸ್​​, ಗೋಮತಿ ಎಕ್ಸ್​ಪ್ರೆಸ್​​, ಬಿಹಾರ ಸಂಪರ್ಕ ಕ್ರಾಂತಿ ರೈಲುಗಳ ಸಮಯದಲ್ಲಿ ಅಲ್ಪಮಟ್ಟದ ಬದಲಾವಣೆಯಾಗಿದೆ.

ABOUT THE AUTHOR

...view details