ಉತ್ತರಖಂಡ್ : ಕೆಜಿಗಟ್ಟಲೆ ಚಿನ್ನವನ್ನು ತನ್ನ ಮೈಮೇಲೆ ಹಾಕಿಕೊಂಡು ಗೋಲ್ಡನ್ ಬಾಬಾ ಎಂದೇ ಹೆಸರು ಪಡೆದಿರುವ ಸುಧೀರ್ ಮಕ್ಕರ್ ಈ ಬಾರಿಯೂ ಕೂಡ ಉತ್ತರ ಉತ್ತರಾಖಂಡ್'ನಲ್ಲಿ ನಡೆಯುವ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಉತ್ತರಾಖಂಡ್'ನಲ್ಲಿ ಪ್ರತಿವರ್ಷ ಶಿವನ ಭಕ್ತರು ಹರಿದ್ವಾರಕ್ಕೆ ಹೋಗುತ್ತಿದ್ದಾರೆ. ಈ ಯಾತ್ರೆಯನ್ನ ಕನ್ವರ್ ಯಾತ್ರೆ ಎಂದು ಕರೆಯಲಾಗುತ್ತದೆ.
ಕಳೆದ 25 ವರ್ಷಗಳಿಂದಲೂ ಕನ್ವಾರ್ ಯಾತ್ರೆಗೆ ತೆರಳುತ್ತಿದ್ದ ಗೋಲ್ಡನ್ ಬಾಬಾ ಈ ಬಾರಿಯೂ ಭಾಗಹಸಿದ್ದು, ಇದು 26ನೇ ಬಾರಿ ಭಾಗವಹಿಸಿದಂತಾಗಿದೆ. ಈ ಯಾತ್ರೆಯಲ್ಲಿ ಭಾಗವಹಿಸಿದಾಗ ಬಾಬಾ ಧರಿಸಿದ್ದ ಚಿನ್ನದ ಪ್ರಮಾಣ ಬರೋಬ್ಬರಿ 16 ಕೆಜಿಯಂತೆ ಕಳೆದ ವರ್ಷ 20 ಕೆಜಿ ಚಿನ್ನ ಧರಿಸಿ ಯಾತ್ರೆಗೆ ಹೋಗಿದ್ದರು. ಆರೋಗ್ಯ ಸಮಸ್ಯೆ ಇರುವುದರಿಂದ ಈ ಬಾರಿ ಕಡಿಮೆ ಪ್ರಮಾಣದ ಚಿನ್ನವನ್ನು ಧರಿಸಿರುವುದಾಗಿ ಬಾಬಾ ತಿಳಿಸಿದ್ದಾರೆ.