ಹೈದರಾಬಾದ್: ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ಎಂಟು ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರ ಮೌಲ್ಯ ಸುಮಾರು 6.62 ಕೋಟಿ ರೂ. ಆಗಿದೆ.
ವಿಮಾನ ನಿಲ್ದಾಣದಲ್ಲಿ 6.62 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ - gold news
ಇದೇ ತಿಂಗಳ 3ರಂದು ಸರಿಯಾದ ದಾಖಲೆಗಳಿಲ್ಲದೆ ಚಿನ್ನವನ್ನು ಪಾರ್ಸಲ್ ಮಾಡಿ ಮುಂಬೈಗೆ ಕಳುಹಿಸಲು ಮುಂದಾಗಿದ್ದರು. ಈ ಬಗ್ಗೆ ಶಂಕೆಗೊಂಡ ಪೊಲೀಸರು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಇದೇ ತಿಂಗಳ 3ರಂದು ಸರಿಯಾದ ದಾಖಲೆ ಇಲ್ಲದೆ ಚಿನ್ನವನ್ನು ಪಾರ್ಸಲ್ ಮಾಡಿ ಮುಂಬೈಗೆ ಕಳುಹಿಸಲು ಮುಂದಾಗಿದ್ದರು. ಈ ಬಗ್ಗೆ ಸಂಶಯಗೊಂಡ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಪಾರ್ಸಲ್ ಬ್ಯಾಗ್ಅನ್ನು ತೆರೆದಿದ್ದಾರೆ. ಅಲ್ಲಿ ವಿವಿಧ ಚಿನ್ನದ ಆಭರಣಗಳು, ವಿದೇಶಿ ಚಿನ್ನದ ಸರಗಳು, ವಜ್ರಗಳು, ಅಮೂಲ್ಯ ಕಲ್ಲುಗಳು, ಸ್ಟೇನ್‌ಲೆಸ್ ಸ್ಟೀಲ್ ಕೈ ಗಡಿಯಾರಗಳು, ಪ್ಲಾಟಿನಂ ಟಾಪ್ಸ್, ಪುರಾತನ ನಾಣ್ಯ ಕಂಡು ಬಂದಿವೆ.
ಕಸ್ಟಮ್ಸ್ ಆಕ್ಟ್ -1962 ಮತ್ತು ಕೇಂದ್ರ ಜಿಎಸ್ಟಿ ಕಾಯ್ದೆ -2017 ನಿಬಂಧನೆಗಳ ಅನ್ವಯ ಪ್ರಕರಣ ದಾಖಲು ಮಾಡಲಾಗಿದ್ದು, ಚಿನ್ನದ ಬಿಸ್ಕತ್ 2.37 ಕೆಜಿ ಮತ್ತು ಆಭರಣ 5.63 ಕೆಜಿ ವಶಪಡಿಸಿಕೊಳ್ಳಲಾಗಿದೆ.