ಚೆನ್ನೈ (ತಮಿಳುನಾಡು):ಚೆನ್ನೈ ವಿಮಾನ ನಿಲ್ದಾಣದಲ್ಲಿ ಚೆನ್ನೈ ಏರ್ ಕಸ್ಟಮ್ಸ್ ಇಲಾಖೆಯು ಇಂದು 48.9 ಲಕ್ಷ ರೂ. ಮೌಲ್ಯದ 1.01 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.
1.01 ಕೆಜಿ ಚಿನ್ನದ ಪೈಕಿ 416 ಗ್ರಾಂ ಚಿನ್ನವನ್ನು ಫ್ಲೈ ದುಬೈ ವಿಮಾನ ಎಫ್‌ಝೆಡ್ 8517 ಮೂಲಕ ದುಬೈನಿಂದ ಆಗಮಿಸಿದ ರಾಮನಾಥಪುರಂನ ಅಬೂಬಕರ್ ಸಿಥಿಕ್ ಎಂಬುವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಚೆನ್ನೈ ಕಸ್ಟಮ್ಸ್ ಮಾಹಿತಿ ನೀಡಿದೆ. ಆತ ತನ್ನ ಗುದನಾಳದಲ್ಲಿ 2 ಕಟ್ಟುಗಳ ಚಿನ್ನದ ಪೇಸ್ಟ್ ಇರಿಸಿಕೊಂಡಿದ್ದು, ವಿಮಾನ ನಿಲ್ದಾಣದಲ್ಲಿ ವೈಯಕ್ತಿಕ ಪರಿಶೀಲನೆ ನಡೆಸುವಾಗ ಸಿಕ್ಕಿಬಿದ್ದಿದ್ದಾನೆ ಎಂದು ಚೆನ್ನೈ ಕಸ್ಟಮ್ಸ್ ತಿಳಿಸಿದೆ.