ಎರ್ನಾಕುಲಂ(ಕೇರಳ): ದುಬೈನಿಂದ ಭಾರತಕ್ಕೆ ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಅವರ ಜಾಮೀನು ಅರ್ಜಿಯನ್ನು ಎರ್ನಾಕುಲಂ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಈ ಪ್ರಕರಣದಲ್ಲಿ ನನ್ನದೇನು ತಪ್ಪಿಲ್ಲ, ಇದರಲ್ಲಿ ಬೇರೆಯವರ ಕೈವಾಡವಿದೆ. ಆದ್ದರಿಂದ ನನಗೆ ಜಾಮೀನು ನೀಡಬೇಕು ಎಂದು ಸ್ವಪ್ನಾ ಸುರೇಶ್ ಜಾಮೀನು ಕೋರಿ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ಆರಂಭಿಕ ಹಂತದಲ್ಲಿರುವುದರಿಂದ ಆರೋಪಿ ಜಾಮೀನು ಪಡೆಯಲು ಅರ್ಹರಾಗಿಲ್ಲವೆಂದು ನ್ಯಾಯಾಲಯ ಆದೇಶ ಹೊರಡಿಸಿದೆ.