ಮಲಪ್ಪುರಂ:ದುಬೈನಿಂದ ಕೇರಳದ ಕೋಯಿಕೋಡ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನಿಂದ ಜಿಲ್ಲಾ ಆಯುಕ್ತ ಟಿ.ಎ.ಕಿರಣ್ ತಂಡ 800 ಗ್ರಾಂ ಅಕ್ರಮ ಚಿನ್ನ ವಶಪಡಿಸಿಕೊಂಡಿದೆ.
ದುಬೈನಿಂದ ಕೇರಳಕ್ಕೆ ಅಕ್ರಮ ಚಿನ್ನ ಸಾಗಾಟ: ಓರ್ವ ವಶಕ್ಕೆ - ಕೋಯಿಕೋಡ್ ವಿಮಾನ ನಿಲ್ದಾಣ
ದುಬೈನಿಂದ ಕೇರಳಕ್ಕೆ ಮಾತ್ರೆಗಳ ಮೂಲಕ 800 ಗ್ರಾಂ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಜಿಲ್ಲಾ ಆಯುಕ್ತ ಟಿ.ಎ.ಕಿರಣ್ ತಂಡ ವಶಪಡಿಸಿಕೊಂಡಿದೆ.
ದುಬೈನಿಂದ ಕೇರಳಕ್ಕೆ ಅಕ್ರಮ ಚಿನ್ನ ಸಾಗಾಟ: ಓರ್ವ ವಶಕ್ಕೆ
ಕೋಯಿಕೋಡ್ನ ಇಬ್ರಾಹಿಂ ಶೆರಿಫ್ ಎಂಬಾತ ದುಬೈನಿಂದ ಕೇರಳಕ್ಕೆ ಮಾತ್ರೆಗಳಲ್ಲಿ 38.86 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನವನ್ನು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ.
ಈ ವೇಳೆ ಕಾರ್ಯಾಚರಣೆ ನಡೆಸಿದ ಜಿಲ್ಲಾ ಆಯುಕ್ತರ ತಂಡ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.