ನವದೆಹಲಿ: ಈಗಾಗಲೇ ಮದುವೆ ಸೀಜನ್ ಆರಂಭಗೊಳ್ಳುತ್ತಿದೆ. ಹೀಗಾಗಿ ಬೆಳ್ಳಿ, ಬಂಗಾರದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ.
ಭಾರೀ ಇಳಿಕೆ ನಂತ್ರ ಕೊಂಚ ಏರಿಕೆ ಕಂಡ ಹಳದಿ ಲೋಹ... ಕಾರಣವೇನು !? - ಜಾಗತಿಕ ಮಟ್ಟದಲ್ಲಿ ಬಂಗಾರ ದರ ಏರಿಕೆ
ಭಾರೀ ಇಳಿಕೆ ನಂತರ ಬಂಗಾರ ದರ ಕೊಂಚ ಏರಿಕೆ ಕಂಡಿದೆ. ಬಂಗಾರದ ಜೊತೆ ಬೆಳ್ಳಿ ದರವೂ ಸಹ ಏರಕೆಗೊಂಡಿದ್ದು, ಗ್ರಾಹಕರ ಕೈ ಸುಡುತ್ತಿದೆ.
![ಭಾರೀ ಇಳಿಕೆ ನಂತ್ರ ಕೊಂಚ ಏರಿಕೆ ಕಂಡ ಹಳದಿ ಲೋಹ... ಕಾರಣವೇನು !?](https://etvbharatimages.akamaized.net/etvbharat/prod-images/768-512-5054468-478-5054468-1573656053391.jpg)
ಈ ದಿನ 10 ಗ್ರಾಂ ಬಂಗಾರ ದರದಲ್ಲಿ 225 ರೂ. ಏರಿಕೆಯಾಗಿದ್ದು, ಒಂದು ಕೆ.ಜಿ ಬೆಳ್ಳಿ ದರದಲ್ಲಿ 440 ಏರಿಕೆಯಾಗಿದೆ.
ದೇಶದ ರಾಜಧಾನಿ ನವದೆಹಲಿಯಲ್ಲಿ ಪ್ರಸ್ತುತ ದರ 10 ಗ್ರಾಂ ಬಂಗಾರಕ್ಕೆ 38,715 ಇದ್ದರೆ, ಕೆಜಿ ಬೆಳ್ಳಿಗೆ 45,480 ರೂ. ದರವಿದೆ. ಇನ್ನು ಬಂಗಾರ ಮತ್ತು ಬೆಳ್ಳಿ ಏರಿಕೆ ಹಲವಾರು ಕಾರಣಗಳಿವೆ. ಮದುವೆ ಒಂದು ಕಾರಣವಾದ್ರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಕುಸಿತವೂ ಒಂದು ಕಾರಣವಾಗಿದೆ. ಇನ್ನು ಅಮೆರಿಕಾ-ಚೀನಾ ವಾಣಿಜ್ಯ ಒಪ್ಪಂದದ ಮೇಲಿನ ಅನುಮಾನುಗಳು ಸಹಾ ದರ ಏರಿಕೆಗೆ ಕಾರಣವಾಗಿವೆ ಎಂದು ವಿಶ್ಲೇಷಕರು ಮಾತಾಗಿದೆ. ಅಂತಾರಾಷ್ಟ್ರೀಯ ಮಾರ್ಕೇಟ್ನಲ್ಲಿ ಔನ್ಸ್ ಬಂಗಾರದ ದರ 1,461 ಡಾಲರ್ಗೆ ಏರಿಕೆಯಾಗಿದೆ. ಔನ್ಸ್ ಬೆಳ್ಳಿಗೆ 16.90 ಡಾಲರ್ಗೆ ಬಂದು ನಿಂತಿದೆ.