ನವದೆಹಲಿ:ಕೊರೊನಾ ವೈರಸ್ ಹಾವಳಿ ನಡುವೆ ಚಿನ್ನದ ಬೆಲೆ ಕೂಡ ಗಗನಕ್ಕೇರುತ್ತಿದ್ದು, ಇದೀಗ 10 ಗ್ರಾಂ. ಬಂಗಾರದ ಬೆಲೆ 50 ಸಾವಿರ ರೂ. ಸನಿಹಕ್ಕೆ ಬಂದು ನಿಂತಿದೆ.
50 ಸಾವಿರ ರೂ. ಸನಿಹಕ್ಕೆ ಬಂಗಾರ... ಒಂದೇ ದಿನ 10ಗ್ರಾಂ ಚಿನ್ನ 647 ರೂ. ಏರಿಕೆ!
ಕಳೆದ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದಾಗ ಈ ವರ್ಷ ಚಿನ್ನದ ಬೆಲೆ ನಾಗಲೋಟದಲ್ಲಿ ಏರಿಕೆಯಾಗುತ್ತಿದ್ದು, ಇದೀಗ 10 ಗ್ರಾಂ ಚಿನ್ನದ ಬೆಲೆ 49 ಸಾವಿರ ರೂ ಗಡಿ ದಾಟಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಒಂದೇ ದಿನ 10 ಗ್ರಾಂ ಚಿನ್ನದ ಬೆಲೆ 647 ರೂ ಏರಿಕೆಯಾಗಿದ್ದು, ಈ ಮೂಲಕ 49,908ರೂಗೆ ತಲುಪಿದೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲೋಹದ ಬೆಲೆ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಬೆಳ್ಳಿ ಬೆಲೆಯಲ್ಲೂ ಗಣನೀಯ ಪ್ರಮಾಣದಲ್ಲಿ ಬೆಲೆ ಏರಿಕೆ ಕಂಡು ಬಂದಿದ್ದು, ಕೆ.ಜಿ ಬೆಳ್ಳಿಗೆ ಇದೀಗ 1,611 ರೂ ಏರಿಕೆಯಾಗಿದ್ದು, 51,870 ರೂ ಆಗಿದೆ. ಕೊರೋನಾ ಬಿಕ್ಕಟ್ಟಿನ ನಡುವೆಯೂ ಬಂಗಾರದ ದರ ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವುದು ಖಚಿತ ಎಂದು ಹೇಳಲಾಗುತ್ತಿದೆ.