ವಯನಾಡ್(ಕೇರಳ):ನಾಥುರಾಮ್ ಗೋಡ್ಸೆ ಮತ್ತು ಪ್ರಧಾನಿ ಮೋದಿ ಒಂದೇ ರೀತಿಯ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟವರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂ ಕೇರಳದ ವಯನಾಡ್ನಲ್ಲಿ ಸಾರ್ವಜನಿಕ ಭಾಷಣದಲ್ಲಿ ಮಾತನಾಡಿದ ರಾಹುಲ್, ಗೋಡ್ಸೆ ಮತ್ತು ಪ್ರಧಾನಿ ಮೋದಿಯವರ ಸಿದ್ಧಾಂತದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅವರು ಒಂದೇ ರೀತಿಯ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟವರು. ಆದರೆ ಮೋದಿಗೆ ಗೋಡ್ಸೆಯ ಸಿದ್ಧಾಂತವನ್ನು ನಂಬುತ್ತೇನೆ ಎಂದು ಹೇಳುವ ಧೈರ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಭಾರತದ ನಿಜವಾದ ಸಾಮರ್ಥ್ಯವೇನು, ಶಕ್ತಿ ಏನು ಎಂಬುದನ್ನೇ ತಿಳಿಯದ ಒಬ್ಬ ವ್ಯಕ್ತಿ ಇಂದು ದೇಶವನ್ನು ಆಳುತ್ತಿದ್ದಾರೆ. ಅಂದು ಮಹಾತ್ಮ ಗಾಂಧಿಯನ್ನು ಗೋಡ್ಸೆ ಗುಂಡು ಹೊಡೆದು ಕೊಲ್ಲುವಾಗ, ಆತ ಗಾಂಧಿಯವರ ಕಣ್ಣುಗಳನ್ನು ನೋಡಿರಲಿಲ್ಲ. ಯಾಕಂದ್ರೆ, ಒಬ್ಬ ಸುಳ್ಳ ಸತ್ಯದ ಕಣ್ಣುಗಳನ್ನು ಯಾವತ್ತೂ ನೋಡುವುದಿಲ್ಲ. ಇಂದು ಪ್ರಧಾನಿ ಮೋದಿಯೂ ಅದನ್ನೇ ಮಾಡುತ್ತಿದ್ದಾರೆ ಎಂದು ರಾಗಾ ಕುಟುಕಿದರು.
ಮೋದಿಯವರೊಂದಿಗೆ ನಿರುದ್ಯೋಗದ ಬಗ್ಗೆ ಕೇಳಿದರೆ ಅವರು, ನಮ್ಮ ಗಮನೆ ಬೇರೆಡೆ ಸೆಳೆಯುತ್ತಾರೆ. ಅವರು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಉದ್ಯೋಗ ಸೃಷ್ಟಿಸುವುದಿಲ್ಲ. ಕಾಶ್ಮೀರ ಹಾಗೂ ಅಸ್ಸೋಂನಲ್ಲಿ ಉರಿಯುತ್ತಿರುವ ಸ್ಥಿತಿ ಉದ್ಯೋಗ ಸೃಷ್ಟಿಸುವುದಿಲ್ಲ ಎಂದು ರಾಹುಲ್ ಕಿಡಿಕಾರಿದರು.
ಗೋಡ್ಸೆಗೆ ಮಹಾತ್ಮ ಗಾಂಧಿ ಮೇಲೆ ಅತೀವ ದ್ವೇಷವಿತ್ತು. ಆತ ಹಲವು ಬಾರಿ ಗಾಂಧಿಯನ್ನು ಕೊಲ್ಲಲು ಯತ್ನಿಸಿದ. ಆದರೆ ಸಫಲವಾಗಿರಲಿಲ್ಲ. ಕಡೆಗೆ ಜನವರಿ 30ರ ಈ ದಿನ ಅದು ಸಾಧ್ಯವಾಯ್ತು ಎಂದು ರಾಹುಲ್ ಹೇಳಿದರು.