ಪೆಟ್ಲಾಡ್(ಗುಜರಾತ್): ಲಾಕ್ಡೌನ್ ಹಿನ್ನೆಲೆ ಸರ್ಕಾರಿ ಸಿಬ್ಬಂದಿ ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಇದರ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ 9 ತಿಂಗಳ ತುಂಬು ಗರ್ಭಿಣಿಯೊಬ್ಬರು ಬಿಡುವಿಲ್ಲದೇ ಕೆಲಸ ಮಾಡ್ತಿದ್ದಾರೆ.
ಗುಜರಾತ್ನ ಪೆಟ್ಲಾಡ್ನಲ್ಲಿರುವ ಸರ್ಕಾರ ಗೋದಾಮಿನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ವನಿತಾಬೆನ್ ರಾಥೋಡ್ ಇದೀಗ 9 ತಿಂಗಳ ತುಂಬು ಗರ್ಭಿಣಿ. ಲಾಕ್ಡೌನ್ ವೇಳೆ ಜಿಲ್ಲೆಯ ಎಲ್ಲರಿಗೂ ಸರಿಯಾಗಿ ಆಹಾರ ಒದಗಿಸುವ ಜವಾಬ್ದಾರಿ ಇವರ ಮೇಲೆ ಬಿದ್ದಿರುವ ಕಾರಣ ಬಿಡುವಿಲ್ಲದೇ ಕೆಲಸದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.