ಮುಂಬೈ:ಲಾಕ್ಡೌನ್ ವಿಸ್ತರಣೆಯಾದ ಹಿನ್ನೆಲೆ ತನ್ನ ನೌಕರರಿಗೆ ನೀಡಲಾಗಿದ್ದ ವೇತನ ರಹಿತ ರಜೆ (ಎಲ್ಡಬ್ಲ್ಯೂಪಿ)ಯನ್ನು ಮೇ 3ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ವಿಮಾನಯಾನ ಸಂಸ್ಥೆ ಗೋ ಏರ್ ತಿಳಿಸಿದೆ.
ನೌಕರರಿಗೆ ವೇತನ ರಹಿತ ರಜೆ ವಿಸ್ತರಿಸಿದ ಗೋ ಏರ್
ಏಪ್ರಿಲ್ 14ಕ್ಕೆ ಮುಕ್ತಾಯವಾಗಬೇಕಿದ್ದ ಲಾಕ್ಡೌನ್ ಮೇ 3ರವರೆಗೆ ವಿಸ್ತರಣೆಯಾದ ಹಿನ್ನೆಲೆ ವಿಮಾನಯಾನ ಸಂಸ್ಥೆ ಗೋ ಏರ್ ತನ್ನ ನೌಕರರಿಗೆ ನೀಡಿದ್ದ ವೇತನ ರಹಿತ ರಜೆಯನ್ನು ವಿಸ್ತರಿಸಿದೆ.
GoAir employees to go on leave without pay till May 3
ಲಾಕ್ಡೌನ್ನಿಂದಾಗಿ ವಿಮಾನ ಸೇವೆಗಳು ಸ್ಥಗಿತಗೊಂಡಿದ್ದರಿಂದ ವಾಡಿಯಾ ಗ್ರೂಪ್ ಒಡೆತನದ ಗೋ ಏರ್ ಸಂಸ್ಥೆಯು ಮಾರ್ಚ್ ತಿಂಗಳಿನಲ್ಲಿ ತನ್ನ ನೌಕಕರರಿಗೆ ವೇತನ ರಹಿತ ರಜೆ (ಎಲ್ಡಬ್ಲ್ಯೂಪಿ) ನೀಡಿತ್ತು. ಆದರೆ, ಏಪ್ರಿಲ್ 14ರಂದು ಕೊನೆಗೊಳ್ಳಬೇಕಿದ್ದ ಲಾಕ್ಡೌನ್ ಮತ್ತೆ ವಿಸ್ತರಣೆಯಾದ ಹಿನ್ನೆಲೆ ಸಂಸ್ಥೆಯು ಈ ನಿರ್ಧಾರಕ್ಕೆ ಬಂದಿದೆ.
ಏಪ್ರಿಲ್ 14ಕ್ಕೆ ಲಾಕ್ಡೌನ್ ಮಕ್ತಾಯವಾಗಬಹುದು ಎಂಬ ನಿರೀಕ್ಷೆಯಲ್ಲಿ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ವಿಮಾನ ಸೇವೆ ಪುನರಾರಂಭಿಸುವ ಯೋಜನೆ ರೂಪಿಸಿದ್ದವು.