ಪಣಜಿ: ಲಾಕ್ಡೌನ್ ಸಂಪೂರ್ಣ ತೆರವಾಗಿ ದೇಶದಲ್ಲಿ ಕೊರೊನಾ ಸಂಕಷ್ಟ ನಿಯಂತ್ರಣಕ್ಕೆ ಬಂದ ಮೇಲಷ್ಟೆ ಪ್ರವಾಸಿಗರ ಪ್ರವೇಶಕ್ಕೆ ರಾಜ್ಯವನ್ನು ಮುಕ್ತ ಮಾಡಲಾಗುವುದು ಎಂದು ಗೋವಾ ಬಂದರು ಖಾತೆ ಸಚಿವ ಮೈಕೆಲ್ ಲೋಬೊ ಹೇಳಿದ್ದಾರೆ.
ಕೊರೊನಾ ಹರಡದಂತೆ ಸಾರ್ವಜನಿಕರು ಗುಂಪಾಗಿ ಸೇರುವುದನ್ನು ತಡೆಯುವುದು ಅಗತ್ಯ. ಲಾಕ್ಡೌನ್ ತೆರವಾದ ತಕ್ಷಣ ರಾಜ್ಯದ ಗಡಿಗಳನ್ನು ತೆರೆಯಲಾಗದು. ಆರೋಗ್ಯ ಸಂಬಂಧಿ ಮಾರ್ಗಸೂಚಿಗಳನ್ವಯ ಸಮಸ್ಯೆಗಳು ಪರಿಹಾರವಾದ ನಂತರವೇ ಪ್ರವಾಸೋದ್ಯಮ ಆರಂಭಿಸಲಾಗುವುದು ಎಂದು ಲೋಬೊ ತಿಳಿಸಿದರು.