ಕರ್ನಾಟಕ

karnataka

ETV Bharat / bharat

ಮಾಂಸಾಹಾರಿಗಳಾಗಿವೆಯಂತೆ ಈ ಜಾನುವಾರುಗಳು: ಗೋವಾ ಸರ್ಕಾರಕ್ಕೆ ಬಿಗ್​​ ಶಾಕ್​​ - ಗೋವಾದಲ್ಲಿ ಮಾಂಸಾಹಾರಿಗಳಾದ ಹಸುಗಳು

ಶುದ್ಧ ಸಸ್ಯಾಹಾರಿಗಳಿಗೆ ಉತ್ತಮ ಉದಾಹರಣೆಯೇ ಹಸುಗಳು. ಆದರೆ ಗೋವಾದಲ್ಲಿ ಕೆಲವು ಜಾನುವಾರುಗಳು ಮಾಂಸಾಹಾರಿಗಳಾಗಿವೆ ಎಂದು ಗೋವಾ ತ್ಯಾಜ್ಯ ನಿರ್ವಹಣೆ ಸಚಿವ ಮೈಕಲ್​ ಲೋಬೋ ತಿಳಿಸಿದ್ದಾರೆ.

ಮಾಂಸಾಹಾರಿಗಳಾದ ಹಸುಗಳು

By

Published : Oct 21, 2019, 10:41 AM IST

ಪಣಜಿ (ಗೋವಾ): ಶುದ್ಧ ಸಸ್ಯಾಹಾರಿಗಳಿಗೆ ಉತ್ತಮ ಉದಾಹರಣೆಯೇ ಹಸುಗಳು. ಆದರೆ ಗೋವಾದಲ್ಲಿ ಕೆಲವು ಜಾನುವಾರುಗಳು ಮಾಂಸಾಹಾರಿಗಳಾಗಿವೆ ಎಂದು ಗೋವಾ ತ್ಯಾಜ್ಯ ನಿರ್ವಹಣೆ ಸಚಿವ ಮೈಕಲ್​ ಲೋಬೋ ತಿಳಿಸಿದ್ದಾರೆ.

ಗೋವಾದ ಕ್ಯಾಲಂಗೂಟ್‌ ಮತ್ತು ಕ್ಯಾಂಡೋಲಿಮ್‌ನಲ್ಲಿ ಬಿಡಾಡಿ ಜಾನುವಾರುಗಳು ಮಾಂಸಾಹಾರಿಗಳಾಗಿ ಬದಲಾಗಿವೆಯಂತೆ. ರೆಸ್ಟೋರೆಂಟ್​ ಹಾಗೂ ಹೋಟೆಲ್​ಗಳಲ್ಲಿ ಅಳಿದುಳಿದ ಚಿಕನ್​ ಪೀಸ್​ ಮತ್ತು ಫಿಶ್​ ಫ್ರೈಅನ್ನು ಬೀದಿ ಜಾನುವಾರುಗಳು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆಯಂತೆ. ಸಸ್ಯಾಹಾರಿಯಾಗಿರುವ ಜಾನುವಾರುಗಳು ಏಕಾಏಕಿ ಮಾಂಸಾಹಾರ ಸೇವಿಸುತ್ತಿರುವುದರಿಂದ ಗೋವಾ ಸರ್ಕಾರ ಚಿಂತೆಗೀಡಾಗಿದೆ.

ಕ್ಯಾಲಂಗೂಟ್‌ನಲ್ಲಿ ಮಾಂಸಾಹಾರ ರೂಢಿಸಿಕೊಂಡ, ಹುಲ್ಲು ಅಥವಾ ಸಸ್ಯಾಹಾರ ತಿನ್ನಲು ಹಿಂದೇಟು ಹಾಕುತ್ತಿದ್ದ ಸುಮಾರು 76 ಬೀದಿ ಜಾನುವಾರುಗಳನ್ನು ಗೋಶಾಲೆಗೆ ಕಳುಹಿಸಿಕೊಡಲಾಗಿದೆ. ಗೋಶಾಲೆಯಲ್ಲಿ ಪಶು ವೈದ್ಯರು ಇವುಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ಅವುಗಳು ಪುನಃ ಸಸ್ಯಾಹಾರಿಗಳಾಗಲು 4 - 5 ದಿನಗಳು ಬೇಕು ಎಂದು ಗೋವಾ ತ್ಯಾಜ್ಯ ನಿರ್ವಹಣೆ ಸಚಿವ ಮೈಕೆಲ್‌ ಲೊಬೋ ಮಾಹಿತಿ ನೀಡಿದ್ದಾರೆ.

ಮಾಂಸಾಹಾರಿಗಳಾಗಿದ್ದೇಕೆ?

ಬೀದಿ ಜಾನುವಾರುಗಳು ಕಸದ ತೊಟ್ಟಿ ಬಳಿ ಬಿದ್ದಿರುವ ಎಲ್ಲಾ ವಸ್ತುಗಳನ್ನು ಮೂಸಿ ನೋಡುತ್ತವೆ. ಮೊದಲು ಈ ಜಾನುವಾರುಗಳು ನಾನ್​ವೆಜ್​ ಪದಾರ್ಥಗಳನ್ನು ಮೂಸಿ ಮುಂದೆ ಹೋಗುತ್ತಿದ್ದವು. ಆದರೆ, ಕ್ಯಾಲಂಗೂಟ್‌ ಮತ್ತು ಕ್ಯಾಂಡೋಲಿಮ್‌ನಲ್ಲಿ ಬಿಡಾಡಿ ಜಾನುವಾರುಗಳು ಹಸಿವು ನೀಗಿಸಲು ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಉಳಿದ ಮಾಂಸಾಹಾರ ಸೇವಿಸಲು ರೂಢಿಸಿಕೊಂಡಿವೆ. ಇದರಿಂದ ಅವುಗಳ ದೇಹದ ವ್ಯವಸ್ಥೆ ಸಹ ಮಾನವನ ರೀತಿಯೇ ಆಗಿದೆ ಎಂದು ಸಚಿವರು ಹೇಳಿದ್ದಾರೆ.

ABOUT THE AUTHOR

...view details