ಗೋವಾ:ಕ್ರಿಸ್ಮಸ್ ಹಬ್ಬದ ಸಲುವಾಗಿ ಇಲ್ಲಿನ ಸಂಚಾರಿ ಪೊಲೀಸರು ಸಂತ ಜೋಸೆಫರ ಉಡುಪು ಧರಿಸಿ ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲನೆಯ ಅರಿವು ಮೂಡಿಸುವ ಮೂಲಕ ಗಮನ ಸೆಳೆದರು.
ಪಣಜಿ ಸಂಚಾರಿ ಪೊಲೀಸರು ತಮ್ಮ ಸಮವಸ್ತ್ರದ ಬದಲಿಗೆ ಸಂತ ಜೋಸೆಫರ ಉಡುಪು ಧರಿಸಿ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸುತ್ತ ವಾಹನ ಸವಾರರಿಗೆ ಸಿಹಿ ಹಂಚಿ ಶುಭ ಕೋರಿದ್ರು. ಪ್ರತಿಯಾಗಿ ಸವಾರರೂ ಪೊಲೀಸರಿಗೆ ಶುಭಾಶಯ ವಿನಿಮಯ ಮಾಡಿದರು.