ಕರ್ನಾಟಕ

karnataka

ETV Bharat / bharat

ಮೀನು ಮಾರುಕಟ್ಟೆ ಬಂದ್​​: ಸಗಟು ಮೀನು ಮಾರುಕಟ್ಟೆ ಸಂಘದಿಂದ ಮುಷ್ಕರ - Market closed

ದಕ್ಷಿಣ ಗೋವಾ ಯೋಜನೆ ಮತ್ತು ಅಭಿವೃದ್ಧಿ ಪ್ರಾಧಿಕಾರವು ಸಗಟು ಮೀನು ಮಾರುಕಟ್ಟೆಯನ್ನು ತೆರೆಯಲು ಅನುಮತಿ ನೀಡದ ಕಾರಣ, ಮಾರ್ಗೋವಾ ಸಗಟು ಮೀನು ಮಾರುಕಟ್ಟೆಗಳ ಸಂಘವು ಜೂನ್ 2 ರಿಂದ ಮುಷ್ಕರ ನಡೆಸಲಿದೆ.

ಮೀನು ಮಾರುಕಟ್ಟೆ ಬಂದ್
ಮೀನು ಮಾರುಕಟ್ಟೆ ಬಂದ್

By

Published : Jun 1, 2020, 6:59 PM IST

ಪಣಜಿ (ಗೋವಾ): ಮಾರ್ಗೋವಾದಲ್ಲಿ ಮೀನು ಮಾರುಕಟ್ಟೆಯನ್ನು ತೆರೆಯಲು ದಕ್ಷಿಣ ಗೋವಾ ಯೋಜನೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಎಸ್‌ಜಿಪಿಡಿಎ) ಅವಕಾಶ ನೀಡದ ಕಾರಣ ಮಾರ್ಗೋವಾ ಸಗಟು ಮೀನು ಮಾರುಕಟ್ಟೆಗಳ ಸಂಘವು ಮಂಗಳವಾರ ಮುಷ್ಕರಕ್ಕೆ ಕರೆ ನೀಡಿದೆ.

ಈ ಮಾರುಕಟ್ಟೆಗೆ ಮೀನುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದ್ರೀಗ ಮಾರುಕಟ್ಟೆ ತೆರೆಯಲು ಅವಕಾಶ ನೀಡದ ಕಾರಣ, ಗೋವಾದ ಹಲವಾರು ಭಾಗಗಳಲ್ಲಿ ಮೀನುಗಳ ಕೊರತೆ ಉಂಟಾಗಬಹುದು. ಸೈಕ್ಲೋನ್​ ಬಂದ ಕಾರಣ ಮೀನುಗಾರರು ಸಮುದ್ರಕ್ಕೂ ಇಳಿಯುತ್ತಿಲ್ಲ. ಇದರಿಂದ ಮೀನುಗಳ ಕೊರತೆ ಉಂಟಾಗುತ್ತದೆ ಎಂಬುದು ಸಂಘದ ಆರೋ ಪವಾಗಿದೆ.

ಮೀನು ಮಾರುಕಟ್ಟೆ ಬಂದ್

ಮಾರ್ಗೋವಾದಲ್ಲಿ ಸಗಟು ಮೀನು ಮಾರುಕಟ್ಟೆಯನ್ನು ತೆರೆಯಲು ದಕ್ಷಿಣ ಗೋವಾ ಯೋಜನೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಎಸ್‌ಜಿಪಿಡಿಎ) ಅವಕಾಶ ನೀಡಿಲ್ಲ. ಹೀಗಾಗಿ ಮಂಗಳವಾರದಿಂದ ಮುಷ್ಕರ ನಡೆಸಲಾಗುತ್ತದೆ ಎಂದು ಮಾರ್ಗಾವೊ ಸಗಟು ಮೀನು ಮಾರುಕಟ್ಟೆಗಳ ಸಂಘದ ಅಧ್ಯಕ್ಷ ಮೌಲಾನಾ ಇಬ್ರಾಹಿಂ ಸುದ್ದಿಗಾರರಿಗೆ ತಿಳಿಸಿದರು.

ಮಾರ್ಗೋವಾ ಸಗಟು ಮೀನು ಮಾರುಕಟ್ಟೆಗೆ ವಿವಿಧ ರಾಜ್ಯಗಳಿಂದ ಮೀನುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಸಮುದ್ರದಲ್ಲಿನ ಪ್ರಸ್ತುತ ಹವಾಮಾನದಿಂದಾಗಿ ಸ್ಥಳೀಯ ಟ್ರಾಲರ್‌ಗಳು ಈಗಾಗಲೇ ಮೀನುಗಾರಿಕೆಯಿಂದ ದೂರವಿದ್ದಾರೆ. ಇದು ರಾಜ್ಯದಲ್ಲಿ ಅದರ ಲಭ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅನುಮತಿಯ ಹೊರತಾಗಿಯೂ, ಸಗಟು ಮೀನು ಮಾರುಕಟ್ಟೆ ಆವರಣವನ್ನು ಹೊಂದಿರುವ ಎಸ್‌ಜಿಪಿಡಿಎ ಅದನ್ನು ತೆರೆಯಲು ನಿರಾಕರಿಸಿದೆ ಎಂದು ಅವರು ಮಾಹಿತಿ ನೀಡಿದರು. ಮಾರ್ಗೋವಾ ಹೊರಗೆ ಮೀನು ಮಾರಾಟ ಮಾಡುತ್ತಿದ್ದ, ಕೆಲವು ವ್ಯಾಪಾರಿಗಳ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ABOUT THE AUTHOR

...view details