ಪಣಜಿ(ಗೋವಾ):ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಗೋವಾ ಬೀಚ್ಗೆ ಆಗಮಿಸುವ ಪ್ರವಾಸಿಗರು ನೀರಿನಲ್ಲಿ ಮುಳುಗದಂತೆ ಕಾಪಾಡಲು ಹೊಸ ಪ್ರೋಟೋಕಾಲ್ ರೂಪಿಸಿದ್ದಾರೆ. ಯಾಕೆಂದರೆ, ಈ ಹಿಂದೆ ನೀರಿನಲ್ಲಿ ಮುಳುಗಿದ ವ್ಯಕ್ತಿಗಳಿಗೆ ಬಾಯಿಯ ಮೂಲಕ ಆಮ್ಲಜನಕ ಪೂರೈಸಿ ಜೀವ ಉಳಿಸುವ ಕಾರ್ಯ ಮಾಡಲಾಗುತ್ತಿತ್ತು. ಆದರೆ, ಇದೀಗ ಕೊರೊನಾ ಹಿನ್ನೆಲೆ ಅದು ಅಸಾಧ್ಯ.
"ಹೊಸ ಕಾರ್ಡಿಯೋಪಲ್ಮನರಿ ಪುನರುಜ್ಜೀವನ (new cardiopulmonary resuscitation) ಎಂಬ ಪ್ರೋಟೋಕಾಲ್ ಆಗಿ ಬದಲಾಗಿದೆ. ಇದು ಕೈಯ ಮೂಲಕ ಜೀವ ಉಳಿಸುವ ಕಾರ್ಯ ಮಾಡುತ್ತದೆ " ಎಂದು ಖಾಸಗಿ ಜೀವರಕ್ಷಕ ಏಜೆನ್ಸಿ ದೃಷ್ಟಿ ಮರೀನ್ನ ಕಾರ್ಯಾಚರಣೆಯ ಮುಖ್ಯಸ್ಥ ರವಿಶಂಕರ್ ಹೇಳಿದ್ದಾರೆ.