ಪಣಜಿ (ಗೋವಾ):ಇಲ್ಲಿನ ಕೇಪ್ ರಾಮಾದಲ್ಲಿಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಪತ್ತೆ ಹಚ್ಚುವಲ್ಲಿ ನೌಕಾ ವಾಯು ನಿಲ್ದಾಣ ಐಎನ್ಎಸ್ ಹನ್ಸಾದ ಭಾರತೀಯ ನೌಕಾಪಡೆಯ ಸುಧಾರಿತ ಲೈಟ್ ಹೆಲಿಕಾಪ್ಟರ್ (ಎಎಲ್ಹೆಚ್) ಯಶಸ್ವಿಯಾಗಿದೆ.
ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಪತ್ತೆಹಚ್ಚಿದ ಸುಧಾರಿತ ಹೆಲಿಕಾಪ್ಟರ್ - Dabolim Airport
ಜುಲೈ 19ರಂದು ಅಗೋಂಡಾ ಕೊಲ್ಲಿ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಮುಳುಗಿದ ಮೃತಪಟ್ಟಿದ್ದ ಬಾಲಕನ ಶವವನ್ನು ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ. ನೌಕಾ ವಾಯು ನಿಲ್ದಾಣ ಐಎನ್‌ಎಸ್ ಹನ್ಸಾದಿಂದ ಭಾರತೀಯ ನೌಕಾಪಡೆಯ ಸುಧಾರಿತ ಲೈಟ್ ಹೆಲಿಕಾಪ್ಟರ್ ಸಹಾಯದಿಂದ ಶವವನ್ನು ಪತ್ತೆ ಹಚ್ಚಲಾಯಿತು.
ಮೃತ ಬಾಲಕ ಖೋಲಾ ನಿವಾಸಿಯಾಗಿದ್ದು, ಜುಲೈ 19ರಂದು ಅಗೋಂಡಾ ಕೊಲ್ಲಿ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಮುಳುಗಿದ್ದಾನೆ ಎಂದು ವರದಿಯಾಗಿತ್ತು. ಮೃತದೇಹ ಕರಾವಳಿಯ ವಾಹನಗಳು ಪ್ರವೇಶಿಸಲಾಗದ ಕಲ್ಲಿನ ಪ್ರದೇಶದಲ್ಲಿತ್ತು. ಈ ಜಾಗ ಕೇಪ್ ರಾಮಾ ಬಳಿಯ ದಬೋಲಿಮ್ ವಿಮಾನ ನಿಲ್ದಾಣದಿಂದ ದಕ್ಷಿಣಕ್ಕೆ 35 ಕಿಲೋಮೀಟರ್ ದೂರದಲ್ಲಿದೆ.
ಸ್ಥಳೀಯ ನಾಗರಿಕರ ಸಹಾಯದಿಂದ ಶವವನ್ನು ಹೆಲಿಕಾಪ್ಟರ್‌ನ ಪಾರುಗಾಣಿಕಾ ಹಾರಾಟಕ್ಕೆ ಜೋಡಿಸಲಾದ ಬುಟ್ಟಿಯಲ್ಲಿ ಇಡಲಾಯಿತು. ಅಲ್ಲಿಂದ ತಂದ ಹೆಲಿಕಾಪ್ಟರ್ ಸ್ಥಳೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಕಾರ್ಯಾಚರಣೆಯ ಸಮಯದಲ್ಲಿ ವಿಮಾನ ಮತ್ತು ಸ್ಥಳೀಯರ ನಡುವೆ ಐಎನ್‌ಎಸ್ ಹನ್ಸಾ ಸಂವಹನ ನಡೆಸಿತ್ತು