ಪಣಜಿ:ಚೀನಾದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ರಾಜ್ಯದಲ್ಲಿ ಕಂಡುಬಂದಿರುವ ಕೆಲವು ಶಂಕಿತ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಲು ಗೋವಾ ಸರ್ಕಾರ ವಿಶೇಷ ಕಾರ್ಯಪಡೆ ರಚಿಸಿದೆ.
ಚೀನಾದಿಂದ ಬರುವವರ ಮೇಲೆ ನಿಗಾ ಇಡಲು ವಿಶೇಷ ಕಾರ್ಯಪಡೆ ರಚಿಸಿದ ಗೋವಾ ಸರ್ಕಾರ - Goa government operation
ಕೊರೊನಾ ವೈರಸ್‌ನಿಂದ ಈವರೆಗೆ ಒಟ್ಟು 80 ಜನರು ಸಾವನ್ನಪ್ಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ವಿಶೇಷ ಕಾರ್ಯಪಡೆ ರಚಿಸಿದೆ. ಈ ತಂಡವು ಚೀನಾದ ವೈರಸ್ ಪೀಡಿತ ಪ್ರದೇಶಗಳಿಗಳಿಂದ ಬರುವ ಜನರ ಗೋವಾ ಭೇಟಿ ಮೇಲೆ ನಿಗಾ ವಹಿಸಿತ್ತದೆ.
![ಚೀನಾದಿಂದ ಬರುವವರ ಮೇಲೆ ನಿಗಾ ಇಡಲು ವಿಶೇಷ ಕಾರ್ಯಪಡೆ ರಚಿಸಿದ ಗೋವಾ ಸರ್ಕಾರ Goa government set special team regarding Karona virus](https://etvbharatimages.akamaized.net/etvbharat/prod-images/768-512-5856002-thumbnail-3x2-sheela.jpg)
ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಾತನಾಡಿ, ಗೋವಾದಲ್ಲಿ ಕೊರೊನಾ ವೈರಸ್ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಲು ವಿಶೇಷ ಕಾರ್ಯಪಡೆ ರಚಿಸುವಂತೆ ಸೂಚನೆ ನೀಡಿದ್ದೇನೆ. ವೈರಸ್ ಪೀಡಿತ ಪ್ರದೇಶಗಳಿಂದ ಗೋವಾಕ್ಕೆ ಬರುವ ಜನರನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ಜೊತೆಗೆ, ಕೇಂದ್ರ ಆರೋಗ್ಯ ಸಚಿವಾಲಯ ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ಕಾರ್ಯಪಡೆ ಕೆಲಸ ಮಾಡುತ್ತದೆ ಎಂದು ರಾಣೆ ಹೇಳಿದರು.
ಈ ಕೊರೊನಾ ವೈರಸ್ ಅತ್ಯಂತ ಅಪಾಯಕಾರಿ ವೈರಸ್ ಎಂದು ತಿಳಿದು ಬಂದಿದೆ. ಹಿಂದೆಂದೂ ಕಂಡು ಕೇಳದ ಈ ವಿಚಿತ್ರ ವೈರಸ್ ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಕೊರೊನಾ ವೈರಸ್ ಸದ್ಯ ಚೀನಾದ ಪ್ರಮುಖ ಸಮಸ್ಯೆಯಾಗಿ ಬಾಧಿಸುತ್ತಿದೆ.